Thursday, May 2, 2024
Homeತಾಜಾ ಸುದ್ದಿಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯೋಕೆ 90 ದಿನ ಕಾಯಲೇಬೇಕು..

ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯೋಕೆ 90 ದಿನ ಕಾಯಲೇಬೇಕು..

spot_img
- Advertisement -
- Advertisement -

ಬೆಂಗಳೂರು : ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಜನರು ಅರ್ಜಿ ಸಲ್ಲಿಸಿದ್ದರೆ ಇನ್ನು ಮುಂದೆ 90 ದಿನ ಕಾಯಬೇಕಿದೆ. ಮೊದಲು 30 ದಿನಗಳ ಕಾಲ ಕಾಯಬೇಕಾಗಿತ್ತು. ಸಾರಿಗೆ ಈ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದೆ. ಕಲಿಕಾ ಮತ್ತು ಚಾಲನಾ ಅನುಜ್ಞಾಪತ್ರ ಪಡೆಯಲು ಆನ್‌ಲೈನ್ ಮೂಲಕ ಸ್ಲಾಟ್ ಬುಕ್ ಮಾಡಬಹುದಾಗಿದೆ. ಹೀಗೆ ಬುಕ್ ಮಾಡಿದರೆ 30 ದಿನ ಕಾಯಬೇಕಿತ್ತು.

ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಹಿಂದಿನ ಕಲಿಕಾ ಮತ್ತು ಚಾಲನಾ ಅನುಜ್ಞಾಪತ್ರದ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ವಿಲೇವಾರಿ ಮಾಡಲು, ಅಭ್ಯರ್ಥಿಗಳು ಒಮ್ಮಯೇ ಬರುವುದನ್ನು ತಡೆಯಲು 90 ದಿನಗಳಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಅಧಿಕಾರಿಗಳು ಆನ್‌ಲೈನ್ ಮೂಲಕ ಬುಕ್ ಮಾಡಿದ ಅಭ್ಯರ್ಥಿಗಳಿಗೆ 90 ದಿನಗಳ ಅವಧಿ ಮೀರದಂತೆ ಸೇವೆಯನ್ನು ಒದಗಿಸಬೇಕು ಎಂದು ಸಾರಿಗೆ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಕೋವಿಡ್ ಸಂದರ್ಭದಲ್ಲಿ ಮೂರು ತಿಂಗಳು ಇಲಾಖೆಗಳ ಕಾರ್ಯ ನಿರ್ವಹಣೆ ಸ್ಥಗಿತವಾಗಿತ್ತು. ಆಗ ಬಾಕಿ ಇದ್ದ ಅರ್ಜಿಗಳನ್ನು ವಿಲೇವಾರಿ ಮಾಡಲು ಇಲಾಖೆ ಪ್ರಯತ್ನ ನಡೆಸುತ್ತಿದೆ. ಆದ್ದರಿಂದ, ಹೊಸ ಅರ್ಜಿ ಸಲ್ಲಿಕೆ ಮಾಡಿದರೆ 90 ದಿನ ಕಾಯಬೇಕಾಗಿದೆ.

- Advertisement -
spot_img

Latest News

error: Content is protected !!