Wednesday, September 18, 2024
Homeಇತರದಕ್ಷಿಣ ಕನ್ನಡದಲ್ಲಿ ಇಂದು 6 ಕೊರೊನಾ ಕೇಸ್ ಪತ್ತೆ; ರಾಜ್ಯದಲ್ಲಿ 208ಕ್ಕೆ ಏರಿದ ಕೊರೊನಾ ಪ್ರಕರಣ 

ದಕ್ಷಿಣ ಕನ್ನಡದಲ್ಲಿ ಇಂದು 6 ಕೊರೊನಾ ಕೇಸ್ ಪತ್ತೆ; ರಾಜ್ಯದಲ್ಲಿ 208ಕ್ಕೆ ಏರಿದ ಕೊರೊನಾ ಪ್ರಕರಣ 

spot_img
- Advertisement -
- Advertisement -

ಬೆಂಗಳೂರು: ದಕ್ಷಿಣ ಕನ್ನಡದಲ್ಲಿ ಇಂದು 6 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು 208 ಪಾಸಿಟಿವ್ ಕೇಸ್  ದಾಖಲಾಗಿದೆ.  

ಬೆಂಗಳೂರಿನಲ್ಲಿ 197 ಪ್ರಕರಣ ಪತ್ತೆಯಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 200ರ ಸನಿಹಕ್ಕೆ ತಲುಪಿದೆ. ಬೆಂಗಳೂರನ್ನ ಹೊರತುಪಡಿಸಿ ದಕ್ಷಿಣ ಕನ್ನಡದಲ್ಲಿ ದಾಖಲಾಗಿರುವ 6 ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ದಾಖಲಾದ ಹೆಚ್ಚಿನ ಕೊರೊನಾ ಕೇಸ್ ಆಗಿದೆ.

ಯಾವುದೇ ಮರಣ ಪ್ರಕರಣ ದಾಖಲಾಗದೆ ಇಂದು 124 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ 0.90 ದಾಖಲಾಗಿದ್ದು, ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 1,799ಕ್ಕೆ ತಲುಪಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು 40, 064 ಪ್ರಕರಣಗಳು ಪತ್ತೆಯಾಗಿರುತ್ತದೆ. ಈವರೆಗೆ ರಾಜ್ಯದಲ್ಲಿ ಒಟ್ಟು 39, 50,978 ಮಂದಿಗೆ ಕೊರೊನಾ ಬಂದಿದ್ದು 39, 09,073 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ರಾಜ್ಯದಲ್ಲಿ ಇಂದು ಒಟ್ಟು 1,075,18 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 23,024 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಗ್ಯ ಇಲಾಖೆಯು ತಿಳಿಸಿರುವಂತೆ ಬೆಂಗಳೂರು ನಗರದಲ್ಲಿ 197, ದಕ್ಷಿಣ ಕನ್ನಡ 6, ಮೈಸೂರು 3, ಚಿಕ್ಕಮಗಳೂರು ಮತ್ತು ತುಮಕೂರಿನಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 208 ಪ್ರಕರಣಗಳು ವರದಿಯಾಗಿದೆ.  

- Advertisement -
spot_img

Latest News

error: Content is protected !!