Saturday, May 18, 2024
Homeಕರಾವಳಿವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಗೆ ಬಂತು ಸಚಿವಾಲಯದಿಂದ ಹೊಸ ಕಾರು; ಈ ಕಾರಿನಲ್ಲಿದೆ...

ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಗೆ ಬಂತು ಸಚಿವಾಲಯದಿಂದ ಹೊಸ ಕಾರು; ಈ ಕಾರಿನಲ್ಲಿದೆ ಹತ್ತಾರು ಸ್ಪೆಷಾಲಿಟಿ

spot_img
- Advertisement -
- Advertisement -

ಬೆಂಗಳೂರು; ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಗೆ ಸಚಿವಾಲಯದಿಂದ ಹೊಸ ಫಾರ್ಚೂನರ್ ಕಾರನ್ನು ನೀಡಲಾಗಿದ್ದು, ಈ ಕಾರು ಹತ್ತಾರು ಸ್ಪೆಷಾಲಿಟಿಗಳನ್ನು ಹೊಂದಿದ್ದು ಗಮನ ಸೆಳೆಯುತ್ತಿದೆ.

ಈ ಕಾರು 360 ಡಿಗ್ರಿ ಕ್ಯಾಮೆರಾ ಸೇರಿದಂತೆ ವಿನೂತನ ಸೌಲಭ್ಯಗಳನ್ನು ಹೊಂದಿದೆ. ಇನ್ನು ಪ್ರಯಾಣದ ಸಂದರ್ಭದಲ್ಲಿ ಸ್ಪೀಕರ್‌ ಖಾದರ್ ಮುಖಕ್ಕೆ ಬೆಳಕು‌‌ ನೀಡುವ ವಿಶೇಷ ಎಲ್ ಇ ಡಿ ಲೈಟ್ ಸೌಲಭ್ಯ ಹೊಂದಿದೆ. ಈ ಕಪ್ಪು ಬಣ್ಣದ ಫಾರ್ಚೂನರ್( ಇ ) ಕಾರಿನ ದರ 33.43 ಲಕ್ಷ ರೂಪಾಯಿಗಳಾಗಿದ್ದು,ಡೀಸಲ್ ಕಾರಿನ ದರ 35.93 ರಿಂದ 51.44 ಲಕ್ಷ ಆಗುತ್ತೆ ಎನ್ನಲಾಗಿದೆ. ಇನ್ನು ಈ ಫಾರ್ಚೂನರ್ ಕಾರಿಗೆ ವಿಶೇಷ ವಿನ್ಯಾಸ ಮಾಡಿರುವುದರಿಂದ ಒಟ್ಟು 41 ಲಕ್ಷ ವೆಚ್ಚವಾಗಿದೆ ಎನ್ನಲಾಗಿದೆ.

ಕಾರಿಗೆ ಜಿಆರ್ ಕಿಟ್ ಅಳವಡಿಕೆ ಮಾಡಲಾಗಿದ್ದು, ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡ ಭೇರುಂಡ ಲಾಂಛನವಿದೆ.ರಾಜ್ಯಪಾಲರ ಹೊರತಾಗಿ ಸ್ಪೀಕರ್‌ಗೆ ಮಾತ್ರ ಈ ಲಾಂಛನವನ್ನು ಹಾಕಲು ಅವಕಾಶ ಇದೆ.

- Advertisement -
spot_img

Latest News

error: Content is protected !!