- Advertisement -
![]()
- Advertisement -
ಬಂಟ್ವಾಳ: ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಮತ್ತು ಆಲಡ್ಕ ಭಾಗದಲ್ಲಿ ನೀರು ನುಗ್ಗಿ ಆತಂಕ ಸೃಷ್ಟಿಯಾಗಿದೆ.
ಪಾಣೆಮಂಗಳೂರು ಮತ್ತು ನಂದಾವರ ಭಾಗದಲ್ಲಿ ತೋಟಗಳು ಮುಳುಗಡೆಯಾಗಿದ್ದು, ಮನೆಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಪಾಣೆಮಂಗಳೂರಿನ ಶಾರದಾ ಹೈಸ್ಕೂಲ್ ಮೈದಾನಕ್ಕೆ ಕೂಡಾ ನದಿ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ಸದ್ಯ ಶಾಲೆಯಲ್ಲಿಯೇ ತಾಲೂಕು ಆಡಳಿತ ಕಾಳಜಿ ಕೇಂದ್ರ ತೆರೆದಿದ್ದು, ಶಾಲಾ ಮೈದಾನ ನೀರಿನಿಂದ ತುಂಬಿರುವ ಕಾರಣ ಶಾಲಾ ಕಟ್ಟಡಕ್ಕೂ ಆತಂಕ ಎದುರಾಗಿದೆ.
- Advertisement -


