Thursday, July 18, 2024
Homeಉದ್ಯಮಬಾಳೆ ಹಣ್ಣಿನ ರಾಜ ನೇಂದ್ರಬಾಳೆ ಹಣ್ಣು ಅಗ್ಗ !

ಬಾಳೆ ಹಣ್ಣಿನ ರಾಜ ನೇಂದ್ರಬಾಳೆ ಹಣ್ಣು ಅಗ್ಗ !

spot_img
- Advertisement -
- Advertisement -

ಕುಂಬಳೆ: ಬಾಳೆ ಹಣ್ಣಿನ ರಾಜ ನೇಂದ್ರ ಬಾಳೆ ಹಣ್ಣು ಇದೀಗ ಅಗ್ಗದ ಬೆಲೆಗೆ ರಸ್ತೆ ಬದಿಯಲ್ಲಿ ದೊರಕುವುದು.ಒಂದೊಮ್ಮೆ ದರ ಕೆ.ಜಿಗೆ 80 ರೂ. ಏರಿದ್ದ ನೇಂದ್ರ ಬಾಳೆಹಣ್ಣು ಪ್ರಕೃತ 5 ಕೆ.ಜಿ.ಗೆ ಕೇವಲ 100 ರೂಪಾಯಿಗೆ ದೊರಕುತ್ತಿದೆ. ಚೌಕಾಶಿ ಮಾಡಿದಲ್ಲಿ ಇನ್ನೂ ಬೆಲೆ ಅಗ್ಗವಾಗುವುದು.
ಈ ಬಾರಿ ನೇಂದ್ರ ಬಾಳೆ ಕೃಷಿಯಲ್ಲಿ ಇಳುವರಿ ಹೆಚ್ಚಾಗಿರುವುದಲ್ಲದೆ ತಮಿಳ್ನಾಡು ಮತ್ತು ಕರ್ನಾಟಕ ರಾಜ್ಯಗಳ ಬಾಳೆ ಬೆಳೆದ ಕೃಷಿಕರು ಕೇರಳ ರಾಜ್ಯಕ್ಕೆ ತಂದು ಮಾರುವುದರಿಂದ ದರ ಕುಸಿಯಲು ಕಾರಣ ವಂತೆ. ಈ ರೀತಿ ದರ ಪಾತಾಳಕ್ಕಿಳಿದಲ್ಲಿ ಮುಂದಿನ ದಿನಗಳಲ್ಲಿ ಕೃಷಿಕರು ಬಾಳೆ ಕೃಷಿಗೆ ಹಿಂದೇಟು ಹಾಕಲಿರುವರೆಂಬ ಅನಿಸಿಕೆ ಕೃಷಿಕರದು ಮತ್ತು ಅಂಗಡಿ ಮಾಲಕರದು.
ಅಗ್ಗದ ನೇಂದ್ರ ಬಾಳೆಹಣ್ಣಿನಿಂದಾಗಿ ಉಳಿದ ಇತರ ತಳಿಯ ಬಾಳೆ ಹಣ್ಣುಗಳ ಬೆಲೆಯೂ ಮಾರುಕಟ್ಟೆಯಲ್ಲಿ ಕುಸಿತಗೊಂಡಿದೆ.ಅಲ್ಲದೆ ನೇಂದ್ರ ಬಾಳೆ ಹಣ್ಣಿನೊಂದಿಗೆ ತರಕಾರಿ ಬೆಲೆಯೂ ಅಗ್ಗವಾಗಿದೆ.

ಮೀನಿನ ಬೆಲೆ ಗಗನಕ್ಕೆ
ಮೀನಿನ ಬೆಲೆ ದಿನದಿಂದ ದಿನಕ್ಕೆ ಆಕಾಶದೆತ್ತರಕ್ಕೆ ಜಿಗಿಯುತ್ತಿದೆ.ಭೂತಾಯಿ ಬಂಗುಡೆಗೆ ಕೆ.ಜಿ.ಗೆ 300 ರೂ. ಆದರೆ ಕೆ.ಜಿ.ಗೆ 500 ಇದ್ದ ಅಂಜಲ್‌ಗೆ 800 ರೂ.ಗೆ ಏರಿದೆ. ಬಡವರಿಗೆ ಇದು ದುಬಾರಿಯಾಗಿದೆ.
ನಿತ್ಯ ಮಾಂಸಾಹಾರಿಗಳು ಚಿಕನ್‌ ಸಹಿತ ನಾನ್‌ವೆಜ್‌ ಸವಿಯುತ್ತಿದ್ದವರಿಗೆ ಸಸ್ಯಾಹಾರಕ್ಕೆ ಒಗ್ಗಿಕೊಳ್ಳಲು ಕಷಾÌಗುತ್ತಿದೆ. ಅಗ್ಗವಾಗಿರುವ ಚಿಕನ್‌ ಸವಿಯಲು ಕೊರೊನಾ ಭಯದ ಕಾರಣವಾದರೆ ಮೀನಿನ ಬೆಲೆ ಏರಿಕೆಯಿಂದ ತಮ್ಮ ಜೇಬಿಗೆ ಕತ್ತರಿಬೀಳುವುದರಿಂದ ಅನಿವಾರ್ಯವಾಗಿ ವೆಜ್‌ ಆಹಾರವನ್ನು ಅವಲಂಬಿಸಬೇಕಾಗಿದೆ.

ಭಾರೀ ಅಗ್ಗವಾದ ಕೋಳಿ
ಕೋಳಿ ಮಾಂಸ ಭಾರೀ ಅಗ್ಗ ವಾಗಿದ್ದು. ಕೆ.ಜಿ.ಗೆ ಕೇವಲ 40 ರೂ.ಗಳಿಂದ ಆರಂಭಗೊಳ್ಳುವ ಕೋಳಿ ಮಾಂಸ ದರ ಪಕ್ಷಿ ಜ್ವರ ಮತ್ತು ಕೊರೊನಾ ವೈರಸ್‌ನಿಂದ ಇನ್ನಷ್ಟು ಅಗ್ಗವಾಗುತ್ತಿದೆ. ಕೋಳಿಮಾಂಸದ ಅಡುಗೆ ಸೇವಿಸುವ ಜನರು ಮಾಂಸಹಾರದಿಂದ ದೂರವಾಗುತ್ತಿದ್ದಾರೆ.

- Advertisement -
spot_img

Latest News

error: Content is protected !!