Friday, June 2, 2023
Homeಕರಾವಳಿಕಾಸರಗೋಡುಕಾಸರಗೋಡು: ಕೊಲ್ಲಿಯಿಂದ ಮರಳಿದ ಐವರಿಗೆ ಶೋಧ

ಕಾಸರಗೋಡು: ಕೊಲ್ಲಿಯಿಂದ ಮರಳಿದ ಐವರಿಗೆ ಶೋಧ

- Advertisement -
- Advertisement -

ಕಾಸರಗೋಡು: ಕೊರೊನಾ ಸೋಂಕು ದೃಢವಾಗಿರುವ ಕಣ್ಣೂರು ನಿವಾಸಿ ಜತೆಯಲ್ಲಿ ಕೊಲ್ಲಿಯಿಂದ ಬಂದಿರುವ ಆರು ಮಂದಿ ಕಾಸರಗೋಡಿನ ನಿವಾಸಿಗಳ ಪೈಕಿ ಒಬ್ಬರು ವರದಿ ಮಾಡಿದ್ದರೂ ಐವರು ವರದಿ ಮಾಡಿರದ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಮಾಡಲು ಶೋಧ ಆರಂಭಿಸಲಾಗಿದೆ.
ಮಾರ್ಚ್‌ 5ರಂದು ಕಣ್ಣೂರು ನಿವಾಸಿ ದುಬಾೖಯಿಂದ ಕಲ್ಲಿಕೋಟೆಗೆ ಬಂದಿ ದ್ದರು. ಅದೇ ವಿಮಾನದಲ್ಲಿ ಕಾಸರಗೋಡು ಜಿಲ್ಲೆಯ ಆರು ಮಂದಿ ಇದ್ದರೆನ್ನಲಾಗಿದೆ.
ಆಗ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ತಪಾಸಣೆ ಇರಲಿಲ್ಲ. ಪ್ರತ್ಯೇಕ ವೈದ್ಯಕೀಯ ತಪಾಸಣೆ ಇದ್ದರೂ ಶಂಕಿತರಿಗೆ ಸ್ವತಃ ತಪಾಸಣೆಗೆ ಹಾಜರಾಗಬಹುದಿತ್ತು. ಇದರ ಪ್ರಯೋಜನವನ್ನು ಪಡೆದ ಕಣ್ಣೂರು ನಿವಾಸಿ ವಿಮಾನ ನಿಲ್ದಾಣದಿಂದ ಯಾವುದೇ ತಪಾಸಣೆ ಇಲ್ಲದೆ ಹೊರಗೆ ಹೋಗಿದ್ದರು.
ಜ್ವರ ಇದ್ದುದರಿಂದ ಮಾ. 6ರಂದು ಕಾಂಕೋಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು. ಮರುದಿನ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದರು. ಗುರುವಾರ ಲ್ಯಾಬ್‌ನಿಂದ ಬಂದ ಪರೀಕ್ಷಾ ವರದಿಯಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಬಳಿಕ ಅವರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು.

- Advertisement -

Latest News

error: Content is protected !!