Thursday, June 4, 2026
Homeಕರಾವಳಿಸುಬ್ರಮಣ್ಯ; ಕೊಂಬಾರಿನಲ್ಲಿ ನಕ್ಸಲ್ ರು ಪ್ರತ್ಯಕ್ಷ; ಮನೆಯೊಂದರಲ್ಲಿ ಊಟ ಮಾಡಿ, ದಿನಸಿ ಸಾಮಾಗ್ರಿ ಪಡೆದು ಹಿಂತಿರುಗಿದ...

ಸುಬ್ರಮಣ್ಯ; ಕೊಂಬಾರಿನಲ್ಲಿ ನಕ್ಸಲ್ ರು ಪ್ರತ್ಯಕ್ಷ; ಮನೆಯೊಂದರಲ್ಲಿ ಊಟ ಮಾಡಿ, ದಿನಸಿ ಸಾಮಾಗ್ರಿ ಪಡೆದು ಹಿಂತಿರುಗಿದ ಕೆಂಪು ಉಗ್ರರು

- Advertisement -
- Advertisement -

ಸುಬ್ರಮಣ್ಯ; ಇಲ್ಲಿನ ಕೊಂಬಾರಿನಲ್ಲಿ ನಕ್ಸಲ್ ರು ಪ್ರತ್ಯಕ್ಷವಾಗಿದ್ದಾರೆ. ಮನೆಯೊಂದರಲ್ಲಿ ಊಟ ಮಾಡಿ, ದಿನಸಿ ಸಾಮಾಗ್ರಿ ಪಡೆದು ಹಿಂತಿರುಗಿದ್ದಾರೆ ಎನ್ನಲಾಗಿದೆ.

ಕೊಂಬಾರು ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಗುರುವಾರ ರಾತ್ರಿ ಆಗಮಿಸಿದ ನಕ್ಸಲರು ಅಲ್ಲಿ ಊಟ, ಮಾಡಿ ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿದ್ದಾರೆ ಎನ್ನಲಾಗಿದೆ. ಗುರುವಾರ ಸಂಜೆ ಏಳು ಗಂಟೆ ವೇಳೆ ತಂಡ ಮನೆಗೆ ಆಗಮಿಸಿ ಊಟ ಮಾಡಿ ಸುಮಾರು ಒಂಬತ್ತು ಗಂಟೆ ವೇಳೆ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದು ಅವರಲ್ಲಿ  ಶಸ್ತಾಸ್ತ್ರ ಹಿಡಿದುಕೊಂಡಿದ್ದರು ಎನ್ನಲಾಗಿದೆ. ಮನೆಯಲ್ಲಿದ್ದ ವೇಳೆ ಮನೆಯವರ ಜತೆ ಮಾತನಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಂಕಿತರು ಮನೆಗೆ ಆಗಮಿಸಿರುವ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಲೇ ನಕ್ಸಲ್‌ ನಿಗ್ರಹ ಪಡೆ, ಪೊಲೀಸರು ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಎಎನ್‌ಎಫ್‌ ತಂಡ ಮನೆಗೆ ಭೇಟಿ ನೀಡಲಾದ ಆಸು-ಪಾಸು ಪರಿಸರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಶಂಕಿತರು ಅದೇ ಪರಿಸರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದತ್ತ ತೆರಳಿರುವ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!