Saturday, June 28, 2025
Homeಅಪರಾಧಕಾರ್ಕಳದ ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ; ಎಎನ್ಎಫ್‌ನಿಂದ ಕೂಂಬಿಂಗ್ ಆಪರೇಷನ್

ಕಾರ್ಕಳದ ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ; ಎಎನ್ಎಫ್‌ನಿಂದ ಕೂಂಬಿಂಗ್ ಆಪರೇಷನ್

spot_img
- Advertisement -
- Advertisement -

ಕಾರ್ಕಳ: ತಾಲೂಕಿನ ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ನಡೆಯುತ್ತಿದೆ ಎಂಬ ನಿಟ್ಟಿನಲ್ಲಿ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ, ಎಎನ್‌ಎಫ್ (ಆ್ಯಂಟಿ ನಕ್ಸಲೈಟ್ ಫೋರ್ಸ್) ತಂಡವು ಪಶ್ಚಿಮಘಟ್ಟ‌ಅರಣ್ಯ‌ ಭಾಗ ಈದು ಗ್ರಾಮ ಮುಸ್ಲೀಂ ಕಾಲೋನಿ ಬಂಡೆಕಲ್ಲು ಸುತ್ತಮುತ್ತ ಬೃಹತ್ ಕೂಂಬಿಂಗ್ ಆಪರೇಷನ್ ನಡೆಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಗ್ರಾಮಸ್ಥರಲ್ಲಿ ಚರ್ಚೆಗಳಾಗುತ್ತಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಎಎನ್ ಎಫ್ ತನಿಖೆಯಲ್ಲಿ ಸ್ಥಳೀಯರಲ್ಲಿ ವಿಚಾರಿಸಿದಾಗ ಈ ಬಗ್ಗೆ ಯಾವುದೇ ಸುಳಿವು, ಕುರುವು ಇನ್ನೂ ಕಂಡುಬಂದಿಲ್ಲ. ನಕ್ಸಲರು ಕರಾವಳಿ ಪಶ್ಚಿಮಘಟ್ಟ ನುಸುಳಿದಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿರುವ ಎಎನ್‌ಎಫ್ ತಂಡವು ಗುರುವಾರ ‌ಮುಂಜಾನೆಯಿಂದಲೇ ಕೋಂಬಿಂಗ್ ಕಾರ್ಯಾಚರಣೆ ಯಲ್ಲಿ ತೊಡಗಿಸಿಕೊಂಡಿದೆ.

- Advertisement -
spot_img

Latest News

error: Content is protected !!