Sunday, May 5, 2024
Homeತಾಜಾ ಸುದ್ದಿಜೈಲಿನಲ್ಲಿ ನವಜೋತ್‌ ಸಿಂಗ್‌ ಸಿಧುಗೆ ಕ್ಲರ್ಕ್ ಹುದ್ದೆ: ಭದ್ರತಾ ಕಾರಣದಿಂದ ವರ್ಕ್ ಫ್ರಂ ಸೆಲ್ ವಿನಾಯಿತಿ

ಜೈಲಿನಲ್ಲಿ ನವಜೋತ್‌ ಸಿಂಗ್‌ ಸಿಧುಗೆ ಕ್ಲರ್ಕ್ ಹುದ್ದೆ: ಭದ್ರತಾ ಕಾರಣದಿಂದ ವರ್ಕ್ ಫ್ರಂ ಸೆಲ್ ವಿನಾಯಿತಿ

spot_img
- Advertisement -
- Advertisement -

ಪಟಿಯಾಲ: ರಸ್ತೆ ರಂಪಾಟ ಪ್ರಕರಣದಲ್ಲಿ ಒಂದು ವರ್ಷ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ ಪಂಜಾಬ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಪಟಿಯಾಲ ಕೇಂದ್ರ ಕಾರಾಗೃಹದಲ್ಲಿ ಕ್ಲರ್ಕ್‌ ಕೆಲಸ ಪಡೆದುಕೊಂಡಿದ್ದಾರೆ. ಬ್ಯಾರಕ್ ಸಂಖ್ಯೆ 7ರಲ್ಲಿರುವ ಸಿಧುಗೆ ಕೈದಿ ಸಂಖ್ಯೆ 241383 ನೀಡಲಾಗಿದೆ.

ಆದರೆ ಉಳಿದ ಕೈದಿಗಳು ಒಂದು ಕಡೆ ಸೇರಿ ಕೆಲಸ ಮಾಡಿದರೆ, ಸಿಧು ಅವರಿಗೆ ಮಾತ್ರ ‘ವರ್ಕ್ ಫ್ರಂ ಸೆಲ್’ ಅವಕಾಶ ನೀಡಲಾಗಿದೆ. ಭದ್ರತಾ ಕಾರಣದಿಂದ ಅವರು ಹೊರಗೆ ಹೋಗಿ ಕೆಲಸ ಮಾಡುವುದು ಬೇಡ ಎಂದು ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ಕ್ಲರಿಕಲ್ ಕೆಲಸದ ಕಡತಗಳು ಸಿಧು ಅವರ ಬ್ಯಾರಕ್‌ಗೆ ರವಾನೆಯಾಗುತ್ತದೆ. ಮೊದಲ ಮೂರು ತಿಂಗಳು ಅವರಿಗೆ ತರಬೇತಿ ನೀಡಲಾಗುತ್ತದೆ. ಸಿಧು ಅವರಿಗೆ ನ್ಯಾಯಾಲಯದ ಸುದೀರ್ಘ ತೀರ್ಪುಗಳನ್ನು ಸಂಕ್ಷಿಪ್ತಗೊಳಿಸಿ, ಜೈಲಿನ ದಾಖಲೆಗಳಾಗಿ ಪರಿವರ್ತಿಸುವ ಕೆಲಸ ನೀಡಲಾಗಿದೆ.

ಜೈಲಿನ ನಿಯಮದ ಪ್ರಕಾರ ಮೊದಲ ಮೂರು ತಿಂಗಳು ಕೈದಿಗಳಿಗೆ ವೇತನರಹಿತ ತರಬೇತಿ ನೀಡಲಾಗುತ್ತದೆ. ಹೀಗಾಗಿ 90 ದಿನಗಳವರೆಗೆ ಸಿಧುಗೆ ಯಾವುದೇ ವೇತನ ಸಿಗುವುದಿಲ್ಲ. ತರಬೇತಿ ಮುಗಿದ ಬಳಿಕ ಅವರನ್ನು ಕೌಶಲವಿಲ್ಲದ ಕೆಲಸಗಾರ, ಅರೆ ಕುಶಲಿ ಅಥವಾ ಕುಶಲ ಕೆಲಸಗಾರ ಎಂದು ವರ್ಗೀಕರಿಸಲಾಗುತ್ತದೆ. ಈ ಅವಧಿಯಲ್ಲಿ ಅವರಿಗೆ 30-90 ರೂ ದೈನಂದಿನ ಸಂಬಳ ನೀಡಲಾಗುತ್ತದೆ. ಈ ಹಣವನ್ನು ಅವರ ಕೈಗೆ ನೀಡುವುದಿಲ್ಲ. ಬದಲಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಶಿಕ್ಷೆಗೆ ಒಳಗಾದ ಅಪರಾಧಿಗಳು ದಿನಕ್ಕೆ ಎಂಟು ಗಂಟೆ ಕೆಲಸ ಮಾಡಬಹುದಾಗಿದೆ. ಅವರ ವೆಚ್ಚಗಳನ್ನು ಸರ್ಕಾರ ಭರಿಸುತ್ತದೆ. 58 ವರ್ಷದ ಸಿಧು, ಕೋರ್ಟ್ ತೀರ್ಪುಗಳನ್ನು ಓದಿ, ಅವುಗಳಲ್ಲಿನ ಪ್ರಮುಖ ಅಂಶಗಳನ್ನು ಸಂಗ್ರಹಿಸುವ ಹಾಗೂ ಜೈಲಿನ ದಾಖಲೆಗಳನ್ನಾಗಿ ರೂಪಿಸುವ ಕೆಲಸ ಮಾಡಬೇಕಿದೆ. ಮಂಗಳವಾರದಿಂದಲೇ ಸಿಧು ಕ್ಲರ್ಕ್ ಕೆಲಸ ಆರಂಭಿಸಿದ್ದಾರೆ. ಅವರು ಬೆಳಿಗ್ಗೆ 9 ರಿಂದ ಮಧ್ಯಾಹ್ನ ಹಾಗೂ 3 ರಿಂದ 5ರ ಎರಡು ಅವಧಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಧು ಅವರನ್ನು ಇರಿಸಿರುವ ಬ್ಯಾರಕ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸಿಧು ಚಟುವಟಿಕೆಗಳ ಮೇಲೆ ಕಣ್ಣು ಇರಿಸುವಂತೆ ಐವರು ವಾರ್ಡನ್‌ಗಳು ಮತ್ತು ನಾಲ್ವರು ಕೈದಿಗಳಿಗೆ ಸೂಚಿಸಲಾಗಿದೆ. 1988ರ ಡಿ. 27ರಂದು ಪಟಿಯಾಲದಲ್ಲಿ ಗುರ್ನಾಮ್ ಸಿಂಗ್ ಎಂಬ ವೃದ್ಧರ ಜತೆ ಪಾರ್ಕಿಂಗ್ ಸ್ಥಳಕ್ಕೆ ಸಂಬಂಧಿಸಿದಂತೆ ಸಿಧು ಜಗಳ ನಡೆಸಿದ್ದರು. ಸಿಧು ಮತ್ತು ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಅವರು ಕಾರಿನ ಒಳಗಿದ್ದ ಗುರ್ನಾಮ್ ಅವರನ್ನು ಹೊರಗೆ ಎಳೆದು ಥಳಿಸಿದ್ದರು. ಗುರ್ನಾಮ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.

- Advertisement -
spot_img

Latest News

error: Content is protected !!