Thursday, June 4, 2026
Homeಕರಾವಳಿಅಖಿಲ ಭಾರತ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನ ಬೆಳ್ತಂಗಡಿ ಸೆಂಟರ್ ಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಅಖಿಲ ಭಾರತ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನ ಬೆಳ್ತಂಗಡಿ ಸೆಂಟರ್ ಗೆ ರಾಷ್ಟ್ರಮಟ್ಟದ ಪ್ರಶಸ್ತಿ

- Advertisement -
- Advertisement -

ಬೆಳ್ತಂಗಡಿ : ಅಖಿಲ ಭಾರತ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನ ಬೆಳ್ತಂಗಡಿ ಸೆಂಟರ್ ಗೆ ರಾಷ್ಟ್ರ ಮಟ್ಟದಲ್ಲಿ ಮೋಸ್ಟ್ ಗ್ರೋವಿಂಗ್ ಸೆಂಟರ್ ರನ್ನರ್ ಅಪ್ ಪ್ರಶಸ್ತಿಯನ್ನು ಹೈದರಬಾದ್ ನಲ್ಲಿ ನಡೆದ NETCON 2023 ನಲ್ಲಿ ಬೆಳ್ತಂಗಡಿ ಶಾಖೆಯ ಛೇರ್ಮನ್ Er. ಜಗದೀಶ್ ಪ್ರಸಾದ್, Er.ವಿದ್ಯಾಕುಮಾರ್, Er. ವಿನೋದ್,Er. ಚೇತನ್ ಅವರು ಸ್ವೀಕರಿಸಿದರು.

ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಕ್ಕಿರುವುದು ಬೆಳ್ತಂಗಡಿ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.150 ಇಂಜಿನಿಯರ್ ಗಳನ್ನೊಳಗೊಂಡ ಬೆಳ್ತಂಗಡಿ ಸೆಂಟರ್ ತನ್ನ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಾ ಸಮಾಜಮುಖಿ ಚಿಂತನೆಗಳೊಂದಿಗೆ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. 2023-25 ಸಾಲಿನ ಅವಧಿಯಲ್ಲಿ  ಕಾರ್ಯದರ್ಶಿಯಾಗಿ Er.ಚೇತನ್ ಕೋಶಧಿಕಾರಿಯಾಗಿ Er.ಕೇಶವ ಕಾರ್ಯನಿರ್ವಹಿಸುತ್ತಿದ್ದಾರೆ.

- Advertisement -

Latest News

error: Content is protected !!