ಬೆಳ್ತಂಗಡಿ: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಾ ಮೃತ್ಯುಂಜಯ ಯಾಗ ನಡೆದಿತ್ತು, ಈ ಯಾಗ ಮಾಡಿ ಹರಸಿದ ಐವರು ಋತ್ವಿಜರಿಗೆ ದಕ್ಷಿಣೆ ಕಳುಹಿಸುವ ಮೂಲಕ ಶಾಸ್ತ್ರದ ಸಂಪ್ರದಾಯವನ್ನು ಪ್ರಧಾನಿಯವರು ಪಾಲಿಸಿದ್ದಾರೆ.
ಬ್ಯಾಂಕ್ ಖಾತೆ ಬಗ್ಗೆ ವಿವರ ಪಡೆದಿಕೊಂಡ ಮೋದಿ ಅವರು ಎರಡು ದಿನಗಳ ಹಿಂದೆ ಎಲ್ಲರಿಗೆ ಗುರುವಾರ ಸಂಜೆ 5.30 ರ ವೇಳೆಗೆ ಎನ್ ಡಿ ಮೋದಿ ಎಸ್ ಬಿ ಐ ಖಾತೆಯಿಂದ ಐದು ಮಂದಿ ಋತ್ವಿಜರ ಖಾತೆಗಳಿಗೆ ದಕ್ಷಿಣೆ ಸಂದಾಯ ಮಾಡಲಾಗಿತ್ತು. ದಕ್ಷಿಣೆಯನ್ನು ಖಾತೆಗೆ ಜಮೆ ಮಾಡುವ ಮೂಲಕ ಡಿಜಿಟಲ್ ಇಂಡಿ ಮಾದರಿ ಬಳಸಿದ್ದಾರೆ.
ಪ್ರಧಾನ ಋತ್ವಿಜ ನಾಗೇಂದ್ರ ಭಾರಧ್ವಾಜ್ ಅವರು ಹೇಳುವ ಪುಕಾರ, ಪ್ರಧಾನಿ ಮೋದಿ ಅವರಿಂದ ಬ್ರಹ್ಮಾರ್ಪಣ ಮಾಡಿಸುವುದೇ ಪುಣ್ಯದ ಕೆಲಸ. ಪ್ರಧಾನಿ ಭೇಟಿ ಸಂದರ್ಭ ಋತಿಜ್ವರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಾವು ನಿಂತೇ ವಿಧಿವಿಧಾನ ಮಾಡಿದೆವು ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ನಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಿದ್ದಾರೆ. ನಾವು ಸಂಕೋಚ ವ್ಯಕ್ತಪಡಿಸಿದಾಗ, ನಮ್ಮಲ್ಲಿ ದೇನಾ ನಹಿ ಹೈ’ ಎಂದು ಹೇಳಿದರು. ಅನಂತರ ನಾವು ನಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದೆವು. ಇಂದು ನಮ್ಮ ಖಾತೆಗೆ ದಕ್ಷಿಣೆ ಹಾಕಿದ್ದಾರೆ ಮೋದಿ ಒಂದು ಶಕ್ತಿ, ವಿಭೂತಿ ಪುರುಷರು. ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ 108 ಋತ್ವಿಜರಿಂದ ಮಹಾ ಮೃತ್ಯುಂಜಯ ಯಾಗ ನಡೆದಿತ್ತು. ಪುಣ್ಯ ಕಲಶೋಧಕವನ್ನು ನಾಗೇಂದ್ರ ಭಾರದ್ವಾಜ್ ಪ್ರಧಾನಿ ಮೋದಿಯವರಿಗೆ ಪ್ರಕ್ಷೋಪನೆ ಮಾಡಿ, ರಕ್ಷೆ ಕಟ್ಟಿ, ಹರಸಿ ಬಂದಿದ್ದರು.
ಪ್ರಧಾನ ಮಂತ್ರಿಗೆ ಹರಸಿ ಬಂದ ಬಗ್ಗೆ ನಾವು ಯಾರಲ್ಲಿಯೂ ಹೇಳಿದರೂ ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಎಲ್ಲರೂ ಸಂತೋಷ್ ಜಿ ಅವರು ಪ್ರಧಾನಿ ಅವರಿಗೆ ಪ್ರಸಾದ ಕೊಟ್ಟಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದರು ಅನಂತರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಬಳಿಕ ಜನ ನಂಬಿದರು.
ಪ್ರಧಾನಿ ಮೋದಿ ಅವರಿಂದ ದಕ್ಷಿಣೆ ಪಡೆದ ಪುರೋಹಿತರು ನಾಗೇಂದ್ರ ಭಾರದ್ವಾಜ್ ಕಟ್ಟಿ ಸುರತ್ಕಲ್, ಗಣೇಶ್ ನಾವಡ ಕಾವೂರು, ವೀರವೆಂಕಟ ನರಸಿಂಹ ಹಂದೆ ಕುಂಬಳೆ, ಪ್ರಸಾದ್ ಭಟ್ ನಂದಳಿಕೆ, ಶ್ರೀ ಹರಿ ಉಪಾಧ್ಯಾಯ ವಾಮಂಜೂರು.