Wednesday, May 22, 2024
Homeತಾಜಾ ಸುದ್ದಿಗ್ರಾಹಕರ ಬಾಯಿಗೆ ಬಿಸಿ ತುಪ್ಪವಾದ ನಂದಿನಿ ತುಪ್ಪ

ಗ್ರಾಹಕರ ಬಾಯಿಗೆ ಬಿಸಿ ತುಪ್ಪವಾದ ನಂದಿನಿ ತುಪ್ಪ

spot_img
- Advertisement -
- Advertisement -

ಬೆಂಗಳೂರು : ನಂದಿನಿ ಹಾಲಿನ ಬೆಲೆ ಏರಿಕೆಯಾಗುತ್ತದೆ ಎಂಬ ಸುದ್ದಿಗಳ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಂದಿನಿ ತುಪ್ಪದ ಬೆಲೆಯಲ್ಲಿ ಒಂದು ತಿಂಗಳಲ್ಲಿ ಬರೋಬ್ಬರಿ 100 ರೂ. ಏರಿಕೆಯಾಗಿದೆ.

ಕರ್ನಾಟಕ ಹಾಲು ಒಕ್ಕೂಟವು ತುಪ್ಪದ ಬೆಲೆಯನ್ನು ಹೆಚ್ಚಿಸಿದೆ. ಒಂದು ಲೀಟರ್ ತುಪ್ಪದ ಬೆಲೆಯು 570 ಗೆ ಏರಿಕೆಯಾಗಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ತುಪ್ಪದ ಬೆಲೆಯನ್ನು ನಂದಿನಿ ನಿರಂತರವಾಗಿ ಹೆಚ್ಚಿಸುತ್ತಿದೆ. ಆಗಸ್ಟ್‌ ತಿಂಗಳಲ್ಲಿ ಒಂದು ಲೀಟರ್‌ ನಂದಿನಿ ತುಪ್ಪದ ದರ ಸುಮಾರು 450 ರೂ. ಇತ್ತು. ಬಳಿಕ ಸೆಪ್ಟೆಂಬರ್‌ 10ರ ವೇಳೆಗೆ ಈ ದರ 518.18 ರೂ. ಗೆ ಏರಿದೆ. ಆದ್ರೆ ಇದೀಗ ಹೊಸ ಪರಿಷ್ಕರಣೆಯಂತೆ ಪ್ರತಿ ಲೀಟರ್‌ಗೆ 570 ರೂ. ಮಾಡಲಾಗಿದೆ.

ಕರ್ನಾಟಕ ಹಾಲು ಒಕ್ಕೂಟವು ಆಗಸ್ಟ್ ನಿಂದ ಸೆಪ್ಟೆಂಬರ್ 10 ಒಳಗೆ ಹಂತಹಂತವಾಗಿ ತುಪ್ಪದ ಬೆಲೆಯನ್ನು ಏರಿಕೆ ಮಾಡುತ್ತಿದ್ದು, ಒಂದು ತಿಂಗಳಲ್ಲಿ ಸುಮಾರು 100 ರೂ.ನಷ್ಟು ಹೆಚ್ಚಳವಾಗಿದೆ.

- Advertisement -
spot_img

Latest News

error: Content is protected !!