Wednesday, June 26, 2024
Homeಕರಾವಳಿಕಸದ ರಾಶಿಯನ್ನು ತೆರವುಗೊಳಿಸಲು ಸಾಧ್ಯವಾಗದೇ ಇದ್ದರೆ ಆಗಲ್ಲ ಎಂದು ಬರೆದುಕೊಡಿ : ಎರಡು ದಿನದಲ್ಲಿ ಕ್ಲಿಯರ್...

ಕಸದ ರಾಶಿಯನ್ನು ತೆರವುಗೊಳಿಸಲು ಸಾಧ್ಯವಾಗದೇ ಇದ್ದರೆ ಆಗಲ್ಲ ಎಂದು ಬರೆದುಕೊಡಿ : ಎರಡು ದಿನದಲ್ಲಿ ಕ್ಲಿಯರ್ ಮಾಡ್ತೇವೆಂದು ಸುಳ್ಯ ನಗರ ಪಂಚಾಯತ್ ಗೆ ನಲಪಾಡ್ ಸವಾಲು

spot_img
- Advertisement -
- Advertisement -

ಸುಳ್ಯ: ನಗರ ಪಂಚಾಯತ್ ಕಚೇರಿ ಮುಂಭಾಗದಲ್ಲಿ ತುಂಬಿಟ್ಟಿರುವ ಕಸದ ರಾಶಿಯನ್ನು ತೆರವು ಮಾಡಲು ನಿಮ್ಮ ಕೈಯಲ್ಲಿ ಆಗದಿದ್ದರೆ ಲಿಖಿತವಾಗಿ ಕೊಡಿ. ಎಷ್ಟೇ ಖರ್ಚಾದರೂ ಎರಡು ದಿನದಲ್ಲಿ ನಾವು ಕ್ಲಿಯರ್ ಮಾಡಿ ಕೊಡುತ್ತೇ” ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಸುಳ್ಯ ನಗರ ಪಂಚಾಯತ್‌ ಆಡಳಿತಕ್ಕೆ ಸವಾಲು ಹಾಕಿದ್ದಾರೆ.

ನಗರ ಪಂಚಾಯತ್‌ಗೆ ಭೇಟಿ ನೀಡಿ ಕಸದ ರಾಶಿಯನ್ನು ವೀಕ್ಷಿಸಿದ ಮಾತನಾಡಿದ ಅವರು ಒಂದು ತಿಂಗಳಲ್ಲಿ ಕಚೇರಿ ಆವರಣದಿಂದ ಸಂಪೂರ್ಣ ಕಸವನ್ನು ತೆರವು ಮಾಡದಿದ್ದರೆ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದರು, ಅಲ್ಲದೇ ಅವರು ರಾಜ್ಯ ಮತ್ತು ರಾಷ್ಟ್ರದ ನಾಯಕರು,ರಾಷ್ಟ್ರೀಯ ಮಾಧ್ಯಮಗಳನ್ನು ಕರೆಸಿ ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -
spot_img

Latest News

error: Content is protected !!