Friday, May 3, 2024
Homeತಾಜಾ ಸುದ್ದಿರೈಲುಗಳಲ್ಲಿ 'ಬೇಬಿ ಬರ್ತ್' ಅಳವಡಿಕೆ; ರೈಲ್ವೆ ಇಲಾಖೆಯ ಹೊಸ ಪ್ರಯೋಗಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ರೈಲುಗಳಲ್ಲಿ ‘ಬೇಬಿ ಬರ್ತ್’ ಅಳವಡಿಕೆ; ರೈಲ್ವೆ ಇಲಾಖೆಯ ಹೊಸ ಪ್ರಯೋಗಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

spot_img
- Advertisement -
- Advertisement -

ನವದೆಹಲಿ: ಪುಟ್ಟ ಮಕ್ಕಳನ್ನು ಕರೆದುಕೊಂಡು ರೈಲುಗಳಲ್ಲಿ ಸಂಚರಿಸುವ ಪೋಷಕರಿಗೆ ಅನುಕೂಲವಾಗುವಂತೆ ರೈಲ್ವೆ ಇಲಾಖೆ ‘ಬೇಬಿ ಬರ್ತ್’ ಅಳವಡಿಸಿದೆ.


ಆರಂಭಿಕ ಹಂತದಲ್ಲಿ ರೈಲುಗಳ ಲೋವರ್ ಬರ್ತ್ ಗಳಿಗೆ ಬೇಬಿ ಬರ್ತ್ ಗಳನ್ನು ಅಳವಡಿಸಲಾಗಿದೆ. ಸಣ್ಣ ಮಕ್ಕಳ ಜೊತೆ ರೈಲಿನಲ್ಲಿ ಸಂಚರಿಸುವ ತಾಯಂದಿರಿಗೆ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ.


ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 770 ಮಿ.ಮೀ ಉದ್ದ, 255 ಮಿ.ಮೀ ಅಗಲ ಹಾಗೂ 76.2 ಮಿ.ಮೀ ಎತ್ತರದ ಬೇಬಿ ಬರ್ತ್ ಗಳನ್ನು ಅಳವಡಿಸಲಾಗಿದೆ. ಇದೀಗ ಕೆಲವೊಂದು ಆಯ್ದ ರೈಲುಗಳಲ್ಲಿ ಈ ವ್ಯವಸ್ಥೆಯಿದೆ, ಮುಂದಿನ ದಿನಗಳಲ್ಲಿ ದೇಶದಾದ್ಯಂತ ರೈಲುಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ರೈಲ್ವೆ ಇಲಾಖೆಯ ಹೊಸ ಪ್ರಯೋಗಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!