Saturday, May 11, 2024
Homeಕರಾವಳಿಮಂಗಳೂರಿನಿಂದ ಹೋಗುವ ಹಾಗೂ ಬರುವ ರೈಲುಗಳಿಗೆ ಐತಿಹಾಸಿಕ ಸ್ಥಳ ಅಥವಾ ಮಹಾನ್ ವ್ಯಕ್ತಿಗಳ ಹೆಸರಿಡುವಂತೆ ಸಂಸದ...

ಮಂಗಳೂರಿನಿಂದ ಹೋಗುವ ಹಾಗೂ ಬರುವ ರೈಲುಗಳಿಗೆ ಐತಿಹಾಸಿಕ ಸ್ಥಳ ಅಥವಾ ಮಹಾನ್ ವ್ಯಕ್ತಿಗಳ ಹೆಸರಿಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ

spot_img
- Advertisement -
- Advertisement -

ಮಂಗಳೂರಿನಿಂದ ಹೋಗುವ ಹಾಗೂ ಬರುವ ರೈಲುಗಳಿಗೆ ಐತಿಹಾಸಿಕ ಸ್ಥಳ ಅಥವಾ ಮಹಾನ್ ವ್ಯಕ್ತಿಗಳ ಹೆಸರಿಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ. ಮಂಗಳೂರಿನಿಂದ ಹೊರಡುವ ಮತ್ತು ಮಂಗಳೂರಿಗೆ ಬರುವ ರೈಲುಗಳನ್ನು ಜನಸಾಮಾನ್ಯರು ಸುಲಭವಾಗಿ ಗುರುತಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಸ್ಥಳೀಯ ಐತಿಹಾಸಿಕ ಸ್ಥಳ ಅಥವಾ ಮಹಾನ್ ವ್ಯಕ್ತಿಗಳ ಹೆಸರನ್ನು ನಾಮಕರಣಗೊಳಿಸುವಂತೆ ಕೇಂದ್ರದ ರೈಲ್ವೇ ಸಚಿವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ 16585/86 ಗೆ ಮಂಗಳಾದೇವಿ ಎಕ್ಸ್ಪ್ರೆಸ್, ಬೆಂಗಳೂರು- ಕಣ್ಣೂರು 16511/12 ರೈಲಿಗೆ ರಾಣಿ ಅಬ್ಬಕ್ಕ ಎಕ್ಸ್ಪ್ರೆಸ್, ಮಡಗಾ೦ವ್- ಮಂಗಳೂರು ಸೆಂಟ್ರಲ್ ರೈಲು 06601/02ಗೆ ಸೌಪರ್ಣಿಕ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್- ಕೊಯಮತ್ತೂರು ರೈಲು 22609/10ಗೆ ತುಳುನಾಡು ಇಂಟರ್‌ಸಿಟಿ ಎಕ್ಸ್ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ 12685/86ಗೆ ತೇಜಸ್ವಿನಿ ಎಸ್‌ಎಫ್ ಎಕ್ಸ್ಪ್ರೆಸ್, ಚೆನ್ನೈ ಎಗ್ಮೋರ್ ಮಂಗಳೂರು ಸೆಂಟ್ರಲ್ 16159/60 ರೈಲಿಗೆ ಚಂದ್ರಗಿರಿ ಎಕ್ಸ್ಪ್ರೆಸ್, ತ್ರಿವೇಂಡ್ರಂ ಸೆಂಟ್ರಲ್ ಮಂಗಳೂರು ಸೆಂಟ್ರಲ್ 16347/48ಗೆ ಕರಾವಳಿ ಎಕ್ಸ್ಪ್ರೆಸ್, ವಿಜಯಪುರ – ಮಂಗಳೂರು ಜಂಕ್ಷನ್ 07377/78 ಗೆ ಹೇಮಾವತಿ ಎಕ್ಸ್ಪ್ರೆಸ್, ಮಂಗಳೂರು ಸೆಂಟ್ರಲ್- ಕಚೆಗುಡ್ಡ 17605/06 ರೈಲಿಗೆ ಫಲ್ಗುಣಿ ಎಕ್ಸ್ಪ್ರೆಸ್ ಎಂಬ ಹೆಸರುಗಳನ್ನು ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!