Thursday, June 4, 2026
Homeಅಪರಾಧಮಂಜೇಶ್ವರದ ಬಳಿಯ ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

ಮಂಜೇಶ್ವರದ ಬಳಿಯ ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

- Advertisement -
- Advertisement -

ಮಂಜೇಶ್ವರ: ಇಲ್ಲಿನ ಕಾಯರ್‌ಕಟ್ಟೆಯ ರಸ್ತೆ ಬದಿ ಟಿಪ್ಪರ್‌ ನಲ್ಲಿ ಬುಧವಾರ ಮುಂಜಾನೆ 3.20ಕ್ಕೆ ವ್ಯಕ್ತಿಯೋರ್ವ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಹೈವೇ ಪಟ್ರೋಲಿಂಗ್‌ ಪೊಲೀಸ್‌ ಹಾಗೂ ಸ್ಥಳೀಯರು ವ್ಯಕ್ತಿಯನ್ನು ಬಂದ್ಯೋ ಡ್‌ನ‌ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಕುಂಬಳೆಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗದೆ ಅಸುನೀಗಿದ್ದಾನೆ.

ಮೃತ ವ್ಯಕ್ತಿಯನ್ನು ಅಶಿಫ್ ಎನ್ನಲಾಗಿದೆ. 

ಆಸಿಫ್ ತನ್ನ ಮನೆಯಿಂದ ಫೋನ್‌ ಕರೆ ಬಂದ ಹಿನ್ನೆಲೆಯಲ್ಲಿ ಮುಂಜಾನೆ 2 ಕ್ಕೆ ಟಿಪ್ಪರ್‌ ಸಹಿತ ಮನೆ ಯಿಂದ ತೆರಳಿದ್ದರು. ಸಂಬಂಧಿಕ ನೋರ್ವ ಫೋನ್‌ ಮಾಡಿದ್ದಾಗಿ ಹೇಳಲಾಗಿದ್ದು, ಆಶಿಫ್ ಉಪ್ಪಳಕ್ಕೆ ತಲುಪಬೇಕಾದ ಸಮಯವಾದರೂ ತಲುಪದ ಕಾರಣ, ಮನೆಯಿಂದ 3 ಕಿ.ಮೀ ದೂರದ‌ ನಿಲ್ಲಿಸಿದ್ದು ಕಂಡುಬಂದಿತು. ಆಶಿಫ್‌ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಿದ್ದರೂ ಪ್ರಕರಣ ನಿಗೂಢವಾಗಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಚಾಲಕನ ಸೀಟಿನ ಬಳಿಯ ಬಾಗಿಲು ಹಾಗೂ ಟಿಪ್ಪರ್‌ನೊಳಗೆ ರಕ್ತದ ಕಲೆಗಳು, ದಾರಿಯಲ್ಲಿ ಒಂದು ಬೆತ್ತ ಕೂಡಾ ಕಂಡುಬಂದಿದ್ದು,  ಆಶಿಫ್‌ ಅವರ ಪಾದರಕ್ಷೆಗಳು ರಸ್ತೆ ಬದಿಯಲ್ಲಿದ್ದವು. ಈ ಎಲ್ಲವೂ ಕೂಡ ಪ್ರಕರಣವನ್ನು ಮತ್ತಷ್ಟು ಸಂಶಯಕೀಡಾಗಿಸಿದೆ.

ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!