Thursday, June 25, 2026
Homeಕರಾವಳಿಮಂಗಳೂರುಸ್ಪೀಕರ್ ಆದ ಬಳಿಕ ನನ್ನ ರಾಜಕೀಯ ಚಾನೆಲ್ ಬಂದ್ ಆಗಿದೆ; ಮಂಗಳೂರಿನಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ....

ಸ್ಪೀಕರ್ ಆದ ಬಳಿಕ ನನ್ನ ರಾಜಕೀಯ ಚಾನೆಲ್ ಬಂದ್ ಆಗಿದೆ; ಮಂಗಳೂರಿನಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ

- Advertisement -
- Advertisement -

ಮಂಗಳೂರು: ಸ್ಪೀಕರ್ ಆದ ಬಳಿಕ ನನ್ನ ರಾಜಕೀಯ ಚಾನೆಲ್ ಬಂದ್ ಆಗಿದ್ದು, ಸಂವಿಧಾನದ ಚಾನೆಲ್ ಮಾತ್ರ ಇದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯು.ಟಿ. ಖಾದರ್, ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಸತ್ಯ ಯಾವಾಗಲೂ ದಾಖಲೆಯಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.

ಆರೋಪದ ಬಗ್ಗೆ ಇಲ್ಲಿಯವರೆಗೆ ಯಾರೂ ಲಿಖಿತವಾಗಿ ದೂರು ಕೊಟ್ಟಿಲ್ಲ, ಆರೋಪ ಮಾಡುವವರು ಎಲ್ಲವನ್ನೂ ಅಧ್ಯಯನ ಮಾಡಿ ಮಾತನಾಡಲಿ, ನನಗೆ ಬೇರೆಯವರು ಮಾತನಾಡಿದ ರೀತಿಯಲ್ಲಿ ಮಾತನಾಡಲು ಆಗುವುದಿಲ್ಲ, ಬಾಲ್ ಬಂದಾಗ ಬ್ಯಾಟ್ ನಲ್ಲಿ ಹೊಡೆಯುವುದು ಎಂದಿದ್ದಾರೆ.

ವಿಧಾನಸಭೆಯಲ್ಲಿ ಶಾಸಕರಿಗೆ ಅಳವಡಿಸಿದ್ದ ಮಸಾಜ್ ಕುರ್ಚಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್, ಮಸಾಜ್ ಕುರ್ಚಿ ಕಂಪನಿಯವರು ಉಚಿತವಾಗಿ ಹಾಕಿರುವುದು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!