Thursday, May 16, 2024
Homeಕರಾವಳಿಮಂಗಳೂರು: ಹಿಜಾಬ್ ವಿವಾದದ ಬೆನ್ನಲ್ಲೇ ಮುಸ್ಲಿಮರಿಂದ ಪಿಯು ಕಾಲೇಜು ಸ್ಥಾಪನೆಗೆ ಹೆಚ್ಚಿದ ಆಸಕ್ತಿ

ಮಂಗಳೂರು: ಹಿಜಾಬ್ ವಿವಾದದ ಬೆನ್ನಲ್ಲೇ ಮುಸ್ಲಿಮರಿಂದ ಪಿಯು ಕಾಲೇಜು ಸ್ಥಾಪನೆಗೆ ಹೆಚ್ಚಿದ ಆಸಕ್ತಿ

spot_img
- Advertisement -
- Advertisement -

ಮಂಗಳೂರು: ಹಿಜಾಬ್ ವಿವಾದದ ಬೆನ್ನಲ್ಲೇ ಕರಾವಳಿಯಲ್ಲಿ  ಮುಸ್ಲಿಮರಿಂದ ಪಿಯು ಕಾಲೇಜು ಸ್ಥಾಪನೆಗೆ ಆಸಕ್ತಿ ಹೆಚ್ಚಾಗಿದೆ. ದ.ಕ ಜಿಲ್ಲೆಯಲ್ಲಿ 13 ಮುಸ್ಲಿಂ ಆಡಳಿತಗಳಿಂದ ಪಿಯು ಕಾಲೇಜು ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿದೆ.

ಹೊಸ ಕಾಲೇಜು ತೆರೆಯಲು 13 ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಪಿಯು ಬೋರ್ಡ್ ಗೆ ಅರ್ಜಿ ಸಲ್ಲಿಸಿವೆ.
ದ.ಕ ಜಿಲ್ಲೆಯಲ್ಲಿ ಈ ಬಾರಿ ಬಂದ 14 ಅರ್ಜಿಗಳ ಪೈಕಿ 13 ಮುಸ್ಲಿಂ ಶಿಕ್ಷಣ ಸಂಸ್ಥೆಗಳದ್ದೇ ಆಗಿದೆ. 14 ಅರ್ಜಿಗಳ ಪೈಕಿ 2 ಕಾಲೇಜಿಗಷ್ಟೇ ಪಿಯು ಕಾಲೇಜು ಸ್ಥಾಪಿಸಲು ಅನುಮತಿ ನೀಡಲಾಗಿದೆ.

ಒಂದು ಮುಸ್ಲಿಂ ಮತ್ತು ಒಂದು ಇತರೆ ಆಡಳಿತದ ಕಾಲೇಜಿಗೆ ಅನುಮತಿ ನೀಡಲಾಗಿದೆ.ಗುರುಪುರದ ಮುಸ್ಲಿಂ ಮತ್ತು ಸುಬ್ರಹ್ಮಣ್ಯದ ಒಂದು ಮುಸ್ಲಿಮೇತರ ಆಡಳಿತದ ಕಾಲೇಜಿಗೆ ಅನುಮತಿ ನೀಡಲಾಗಿದೆ‌. ಉಳಿದ 12 ಮುಸ್ಲಿಂ ಆಡಳಿತದ ಕಾಲೇಜಿನ ಅನುಮತಿ ಅರ್ಜಿಗಳು ಪೆಂಡಿಂಗ್ ಉಳಿದಿವೆ ಎನ್ನಲಾಗಿದೆ..

- Advertisement -
spot_img

Latest News

error: Content is protected !!