Sunday, June 7, 2026
Homeಉತ್ತರ ಕನ್ನಡವಿಟ್ಲ: ಬಾಡಿಗೆ ಮನೆಯಲ್ಲಿ ವಾಸವಿದ್ದ ಅನ್ಯಕೋಮಿನ ಜೋಡಿ: ಸ್ಥಳೀಯರ ಮಾಹಿತಿಯಂತೆ ಯುವಕ ಹಾಗೂ ಯುವತಿಯನ್ನು ವಶಕ್ಕೆ...

ವಿಟ್ಲ: ಬಾಡಿಗೆ ಮನೆಯಲ್ಲಿ ವಾಸವಿದ್ದ ಅನ್ಯಕೋಮಿನ ಜೋಡಿ: ಸ್ಥಳೀಯರ ಮಾಹಿತಿಯಂತೆ ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ವಿಟ್ಲ: ಕಳೆದ ಒಂದು ವಾರದಿಂದ ವಿಟ್ಲ ಪಳಿಕೆ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಶಿರಸಿ ಮೂಲದ ಅನ್ಯಕೋಮಿನ ಜೋಡಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಟ್ಲ ಬೊಬ್ಬೆಕೇರಿ ಪೆಟ್ರೋಲ್ ಬಂಕ್ ನಲ್ಲಿ ಟ್ಯಾಂಕರ್ ಲಾರಿ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡ ಈ ಯುವಕ ತಾನು ಹಿಂದ. ನನ್ನ ಹೆಸರು ವಿಜಯ್ ಎಂಬುವುದಾಗಿ ಹೇಳಿ ಎಲ್ಲರನ್ನು ನಂಬಿಸಿ ವಂಚಿಸಿದ್ದಾನೆ. ಆತ ತನ್ನ ಕೈಗೆ ಹಿಂದೂ ಧರ್ಮದ ನೂಲನ್ನು ಕಟ್ಟಿದ್ದ. ಈತ ಅನ್ಯ ಕೋಮಿನ ಯುವಕ ಎಂಬ ವಿಚಾರವನ್ನು ತಿಳಿದ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿ ಜೋಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೋಡಿಗಳನ್ನು ವಶ ಪಡಿಸಿಕೊಂಡ ವಿಟ್ಲ ಪೊಲೀಸರು ಆತನನ್ನು ವಿಚಾರಿಸಿದ್ದು ಈ ವೇಳೆ ಮುಸ್ಲಿಂ ಯುವಕನಗಿದ್ದು ಹುಸೈನ್ ಎಂಬುವುದಾಗಿ ವಿಚಾರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

- Advertisement -

Latest News

error: Content is protected !!