Saturday, June 6, 2026
Homeಕರಾವಳಿಮಂಗಳೂರು: ಆರ್ ಟಿ ಸಿಯಲ್ಲಿ ಮಳಲಿ ಮಸೀದಿ ಹೆಸರು ನಮೂದಿಸಲು ಕೋರ್ಟ್ ತಡೆ

ಮಂಗಳೂರು: ಆರ್ ಟಿ ಸಿಯಲ್ಲಿ ಮಳಲಿ ಮಸೀದಿ ಹೆಸರು ನಮೂದಿಸಲು ಕೋರ್ಟ್ ತಡೆ

- Advertisement -
- Advertisement -

ಮಂಗಳೂರು:  ಆರ್‌ಟಿಸಿಯಲ್ಲಿ ಕಲಂ ನಂ. 11ರಲ್ಲಿ  ಮಳಲಿ ಮಸೀದಿಯ ಜಾಗಕ್ಕೆ ಸಂಬಂಧಿಸಿದಂತೆ ಮಸೀದಿಯ ಹೆಸರು ನಮೂದಿಗೆ ಸಹಾಯಕ ಆಯುಕ್ತರ ನ್ಯಾಯಾಲಯ (ಎಸಿ ಕೋರ್ಟ್‌) ತಡೆಯಾಜ್ಞೆ ನೀಡಿದೆ.

ಮಸೀದಿ ಜಾಗದ ಆರ್‌ಟಿಸಿಯ ಕಲಂ ನಂ. 9ರಲ್ಲಿ ಜಾಗದ ಮಾಲಕರು ಸರಕಾರ ಎಂಬುದಾಗಿ ನಮೂದಿಸಿದ್ದು ಕಲಂ ಸಂಖ್ಯೆ 11ರಲ್ಲಿ ಜಾಗದ ಹಕ್ಕುದಾರರಾಗಿ ಮಸೀದಿ ಹೆಸರು ಉಲ್ಲೇಖೀಸಲಾಗಿತ್ತು. ಇದನ್ನು ಪ್ರಶ್ನಿಸಿ ಎಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಎಸಿ ಕೋರ್ಟ್‌ ಮಸೀದಿ ಹೆಸರು ನಮೂದು ಮಾಡಲು ತಡೆಯಾಜ್ಞೆ ನೀಡಿದೆ.

ಮಸೀದಿ ನವೀಕರಣ ಸಂದರ್ಭ ದೇವಾಲಯ ಹೋಲುವ ರಚನೆಗಳು ಕಂಡುಬಂದ ಹಿನ್ನೆಲೆಯಲ್ಲಿ ಕೋರ್ಟ್‌ ಕಮಿಷನರ್‌ ಮೂಲಕ ಸರ್ವೇ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಮುಂದಿನ ವಿಚಾರಣೆ ಜೂ. 22ರಂದು ನಡೆಯಲಿದೆ.

- Advertisement -

Latest News

error: Content is protected !!