- Advertisement -
- Advertisement -
ಬೆಂಗಳೂರು:ಸಿನಿರಂಗದಲ್ಲಿ ಸಾಕಷ್ಟು ಸುದ್ದಿಮಾಡಿದ್ದ ರಾಬರ್ಟ್ ಸಿನಿಮಾ ಕನ್ನಡಿಗರಿಗೆ ಇಷ್ಟವಾಗಿತ್ತು.ಸಧ್ಯ ಈ ಚಿತ್ರದ ನಿರ್ಮಾಪಕ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ಮತ್ತು ಅವರ ಸಹೋದರ ಹಾಗೂ ಇಬ್ಬರು ರೌಡಿಶೀಟರ್ಗಳ ಹತ್ಯೆಗೆ ಸಂಚು ರೂಪಿಸಿದ್ದ ಬಾಂಬೆ ರವಿ ತಂಡದ ಏಳು ಮಂದಿಯನ್ನು ದಕ್ಷಿಣ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ದರ್ಶನ್, ಗಿರೀಶ್, ಮೋಹನ್, ರಾಜನ್ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಪ್ರಮುಖ ಆರೋಪಿ ಬಾಂಬೆ ರವಿ ಮತ್ತು ನೀಲಸಂದ್ರದ ಮಂಜುನಾಥ್ ಎಂಬುವರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ.ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರ ಕಾರು ಪರಿಶೀಲಿಸಿದಾಗ ಹತ್ತಾರು ಮಾರಕಾಸ್ತ್ರಗಳು ಇರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.
- Advertisement -