Thursday, June 4, 2026
Homeತಾಜಾ ಸುದ್ದಿಕಡಬ: ಶ್ರೀರಾಮಸೇನೆ ಮುಖಂಡನ ಮೇಲೆ ತಳ್ವಾರ್ ದಾಳಿ

ಕಡಬ: ಶ್ರೀರಾಮಸೇನೆ ಮುಖಂಡನ ಮೇಲೆ ತಳ್ವಾರ್ ದಾಳಿ

- Advertisement -
- Advertisement -

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಅಜ್ಜಿಕಟ್ಟೆ ಸಮೀಪ ಕಡಬದ ಶ್ರೀ ರಾಮ ಸೇನೆಯ ಮುಖಂಡರೋರ್ವರ ಮೇಲೆ ನಾಲ್ಕು ಬೈಕ್ ನಲ್ಲಿ ಬಂದ ಪರಿಚಿತರ ತಂಡವೊಂದು ಹಲ್ಲೆಗೆ ಮುಂದಾಗಿ ತಲ್ವಾರಿನಿಂದ ದಾಳಿಗೆ ಯತ್ನಿಸಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಶ್ರೀ ರಾಮ ಸೇನೆ ಮುಂಖಂಡ ಗೋಪಾಲ ನಾಯ್ಕ್ ಮೇಲಿನ ಮನೆ ಅವರು ತನ್ನ ಸಂಬಂಧಿಕರಿಗೆ ಸ್ಕೂಟಿಯಲ್ಲಿ ಕಡಬದಿಂದ ಔಷಧ ಕೊಂಡು ಹೋಗುತ್ತಿದ್ದ ವೇಳೆ ತಳ್ವಾರು ದಾಳಿ ಮಾಡಿ ಹಲ್ಲೆಗೆ ಯತ್ನಿಸಿರುವುದಾಗಿ ಆರೋಪಿಸಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕೆಲವು ಸಮಯದ ಹಿಂದೆ ಕಡಬದಲ್ಲಿ ನಡೆದ ಕಬಡ್ಡಿ ಪಂದ್ಯಾಟದ ವೇಳೆ ನಡೆದ ಹೊಡೆದಾಟವೇ ಈ ದಾಳಿಗೆ ಕಾರಣವಾಗಿದ್ದು ಅನಿಲ್ ಮತ್ತು ಆತನ ಸಹಚರರು ಕೊಲೆಗೆ ಯತ್ನಿಸಿರಬಹುದೆಂದು ಗೋಪಾಲ ನಾಯ್ಕ್ ಆರೋಪಿಸಿದ್ದಾರೆ. ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ.

- Advertisement -

Latest News

error: Content is protected !!