Saturday, June 6, 2026
Homeತಾಜಾ ಸುದ್ದಿಮಂಗಳೂರಿನಲ್ಲಿ ಯುವಕನ ಮೇಲೆ ತಲವಾರ್ ನಿಂದ ದಾಳಿ

ಮಂಗಳೂರಿನಲ್ಲಿ ಯುವಕನ ಮೇಲೆ ತಲವಾರ್ ನಿಂದ ದಾಳಿ

- Advertisement -
- Advertisement -

ಮಂಗಳೂರು:  ಇಲ್ಲಿನ ಅಡ್ಡೂರಿನಲ್ಲಿ ಯುವಕನ ಮೇಲೆ ತಲವಾರು ದಾಳಿ ನಡೆಸಿ ತಂಡವೊಂದು ಕೊಲೆ ಯತ್ನ ನಡೆಸಿದ ಘಟನೆ ನಡೆದಿದೆ. ಇನ್ನು ತಲವಾರು ದಾಳಿಗೆ ಒಳಗಾದ ಯುವಕನನ್ನು ಅಡ್ಡೂರು ನಿವಾಸಿ ಮಹಮ್ಮದ್ ತಾಜುದ್ದೀನ್ ಎಂದು ಗುರುತಿಸಲಾಗಿದೆ.

ಯುವಕ ಅಡ್ಡೂರಿನಿಂದ ಮನೆ ಕಡೆ ತೆರಳುವ ವೇಳೆ ಮೂರು ಮಂದಿಯ ತಂಡ ತಾಜುದ್ದೀನ್ ಮೇಲೆ ದಾಳಿ ನಡೆಸಿದೆ. ಇನ್ನು ಫರ್ವೀಝ್ ಹಾಗೂ ತಂಡ ಈ ಕೃತ್ಯ ಎಸಗಿದೆ ಅಂತಾ ಹೇಳಲಾಗುತ್ತಿದೆ.

ದಾಳಿಯಿಂದ ಗಾಯಗೊಂಡಿರುವ ಯುವಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಿಲ್ಲೆಯಲ್ಲಿ ಪದೇ ಪದೇ ಇಂತಹ ಕೃತ್ಯಗಳು ನಡೆಯುತ್ತಿರೋದು ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ.

- Advertisement -

Latest News

error: Content is protected !!