Sunday, May 19, 2024
HomeUncategorizedಬೆಳ್ತಂಗಡಿ: ಮುಂಡಾಜೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಳ; ಅಧಿಕಾರಿಗಳ ಭೇಟಿ

ಬೆಳ್ತಂಗಡಿ: ಮುಂಡಾಜೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಳ; ಅಧಿಕಾರಿಗಳ ಭೇಟಿ

spot_img
- Advertisement -
- Advertisement -

ಬೆಳ್ತಂಗಡಿ: ಮುಂಡಾಜೆ ಪರಿಸರದ ದುಂಬೆಟ್ಟು ಕಜೆ ಭಾಗಗಳಲ್ಲಿ ಆನೆಗಳ ಗುಂಪೊಂದು ಬಿಡಾರ ಹೂಡಿದ್ದು, ಇದರಿಂದ ಆ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆನೆಗಳ ಹಿಂಡನ್ನು ಓಡಿಸಲು ಪರಿಣತ ಅರಣ್ಯ ಅಧಿಕಾರಿಗಳು ಆ ಪ್ರದೇಶದ ಸ್ಥಳೀಯರಲ್ಲಿ ಮಾಹಿತಿಯನ್ನು ಪಡೆಯಲು ಮಾ.14 ರಂದು ಭೇಟಿ ನೀಡಿದರು.


ದುಂಬೆಟ್ಟಿನ ಸಚಿನ್ ಭಿಡೆ ಸೇರಿದಂತೆ ಹಲವು ಕೃಷಿಕರ ತೋಟಗಳಿಗೆ ನುಗ್ಗಿದ ಕಾಡಾನೆ ಬಾಳೆಗಿಡಗಳನ್ನು ಹಾಳುಮಾಡಿದ್ದು, ಹಲವು ದಿನಗಳಿಂದ ನಿರಂತರ ಕಾಡಾನೆ ದಾಳಿ ನಡೆಸುತ್ತಿರುವುದು ಇಲ್ಲಿನ ಕೃಷಿಕರ ಚಿಂತೆಗೆ ಕಾರಣವಾಗಿದೆ. ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಕಾಡಾನೆ ಬೇರೆ ಪ್ರದೇಶಗಳಿಗೆ ಹೋಗಲು ಹಿಂಜರಿದಿರುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಸಾಧ್ಯತೆ ಇದೆ.

ಇದರ ಪರಿಣಾಮ ಇಲ್ಲಿನ ಕೃಷಿಕರು ಕೃಷಿ ನಷ್ಟದ ಜತೆ ಜೀವ ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ.

- Advertisement -
spot_img

Latest News

error: Content is protected !!