Wednesday, June 3, 2026
Homeಕರಾವಳಿಉಡುಪಿಶಿರಸಿ ಮಾರಿಕಾಂಬೆ ದರ್ಶನ ಪಡೆದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಶಿರಸಿ ಮಾರಿಕಾಂಬೆ ದರ್ಶನ ಪಡೆದ ಸಚಿವ ಕೋಟ ಶ್ರೀನಿವಾಸ ಪೂಜಾರಿ

- Advertisement -
- Advertisement -

ಶಿರಸಿ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಶಿರಸಿ ಮಾರಿಕಾಂಬೆಯ ದರ್ಶನ ಪಡೆದಿದ್ದಾರೆ. ಗದ್ದುಗೆಯಲ್ಲಿರುವ ಮಾರಿಕಾಂಬೆ ದರ್ಶನ ಪಡೆದು
ಮಾರಿಕಾಂಬೆಗೆ ಮಂಗಳಾರತಿ ಹಾಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ದೇವಿಯ ಸಾನಿಧ್ಯದಲ್ಲಿ ದೇವಳದ ಆಡಳಿತ ಸಮಿತಿ ವತಿಯಿಂದ ಜಿಲ್ಲಾ‌ಉಸ್ತುವಾರಿ ಸಚಿವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಸಚಿವರ ಜೊತೆ ಸ್ಥಳೀಯ ಬಿಜೆಪಿ ಮುಖಂಡರು ಕೂಡಾ ದೇವಿಯ ದರ್ಶನ ಪಡೆದಿದ್ದಾರೆ.

ನಿನ್ನೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕುಟುಂಬ ಸಮೇತ ಮಾರಿಕಾಂಬೆ ದರ್ಶನ ಪಡೆದಿದ್ದರು.

- Advertisement -

Latest News

error: Content is protected !!