Tuesday, June 6, 2023
Homeತಾಜಾ ಸುದ್ದಿತಮಿಳು ನಟ ಧನುಷ್ ಅವರನ್ನು ವಿವಾಹವಾಗಲಿದ್ದಾರಾ ಬಹುಭಾಷಾ ನಟಿ ಮೀನಾ?

ತಮಿಳು ನಟ ಧನುಷ್ ಅವರನ್ನು ವಿವಾಹವಾಗಲಿದ್ದಾರಾ ಬಹುಭಾಷಾ ನಟಿ ಮೀನಾ?

- Advertisement -
- Advertisement -

ಚೆನ್ನೈ: ರಜನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಷ್ ವೈವಾಹಿಕ ಬದುಕಿನಲ್ಲಿ  ಪರಸ್ಪರ ದೂರವಾಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಡಿವೋರ್ಸ್ ಬಳಿಕ ಧನುಷ್ ಬಹುಭಾಷಾ ನಟಿ ಮೀನಾ ಅವರನ್ನು ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ಬೈಲ್ವಾನ್ ರಂಗನಾಥನ್ ನಟ ಧನುಶ್‌ ಮತ್ತೆ ಮದುವೆಯಾಗಲಿದ್ದಾರೆ ಎಂದು ತನ್ನ ಯೂಟ್ಯೂಬ್ ಚಾನೆಲ್ ಮೂಲಕ  ಹೇಳಿದ್ದಾರೆ. ಅಲ್ಲದೇ ಧನುಷ್ ದಕ್ಷಿಣ ಭಾರತದ ನಟಿ ಮೀನಾ ಅವರನ್ನು ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂದು  ಹೇಳಿದ್ದಾರೆ, ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಧನುಷ್ ಕಡಿದುಕೊಂಡಿರುವುದರಿಂದ ಜುಲೈನಲ್ಲಿ ಮೀನಾಳನ್ನು ಮದುವೆಯಾಗುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.ಅಲ್ಲದೇ ಮೀನಾ ಇತ್ತೀಚೆಗಷ್ಟೇ ಪತಿಯನ್ನು ಕಳೆದುಕೊಂಡಿದ್ದಾರೆ. ಇಬ್ಬರೂ ಏಕಾಂಗಿಯಾಗಿ ಬದುಕುತ್ತಿದ್ದಾರೆ. ಇವರಿಬ್ಬರು ಮದುವೆ ಆಗದೇ ಇದ್ದರೆ  ಇಬ್ಬರೂ ಒಟ್ಟಿಗೆ ವಾಸಿಸುವ ಸಾಧ್ಯತೆಯಿದೆ ಎಂದು ಬೈಲ್ವಾನ್ ತಮ್ಮ ಚಾನೆಲ್‌ನಲ್ಲಿ ಹೇಳಿದ್ದಾರೆ. ಸದ್ಯ ಬೈಲ್ವಾನ್ ಹೇಳಿಕೆ ಕಾಲಿವುಡ್ ನಲ್ಲಿ ಭಾರೀ ಸೆನ್ಸೆಷನ್ ಕ್ರಿಯೇಟ್ ಮಾಡಿದೆ.

- Advertisement -

Latest News

error: Content is protected !!