Tuesday, June 6, 2023
Homeಕರಾವಳಿಉಪ್ಪಿನಂಗಡಿ; ಮಗಳ ಮದುವೆ ಚಿನ್ನ ಖರೀದಿಗೆ ಹೋಗುತ್ತಿದ್ದಾಗ 10 ಲಕ್ಷ ದೋಚಿದ ದುಷ್ಕರ್ಮಿ

ಉಪ್ಪಿನಂಗಡಿ; ಮಗಳ ಮದುವೆ ಚಿನ್ನ ಖರೀದಿಗೆ ಹೋಗುತ್ತಿದ್ದಾಗ 10 ಲಕ್ಷ ದೋಚಿದ ದುಷ್ಕರ್ಮಿ

- Advertisement -
- Advertisement -

ಉಪ್ಪಿನಂಗಡಿ;ವ್ಯಕ್ತಿಯೊಬ್ಬರು ತಮ್ಮ  ಮಗಳ ಮದುವೆಗೆಂದು  ಚಿನ್ನ ಖರೀದಿಗಾಗಿ 10 ಲಕ್ಷವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಯೊಬ್ಬ ಅದನ್ನು ದೋಚಿ ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ..

ಉಪ್ಪಿನಂಗಡಿಯ ಕಾಯರ್ಪಾಡಿ ನಿವಾಸಿ ಮಹಮ್ಮದ್ ಎಂಬವರು ತನ್ನ ಪತ್ನಿಯ ಜೊತೆ ತನ್ನ ಮಗಳ ವಿವಾಹಕ್ಕೆ ಚಿನ್ನ ಖರೀದಿಸಲು ಉಪ್ಪಿನಂಗಡಿ ಪೇಟೆಗೆ ಹೋಗುವ ಉದ್ದೇಶದಿಂದ ಹಣವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಸ್ಕೂಟರ್ ನ ಡಿಕ್ಕಿಯಲ್ಲಿಟ್ಟಿದ್ದರು .ಅವರು ತೆರಳುವ ಮಾರ್ಗ ಮಧ್ಯೆ ಸ್ಕೂಟರ್ ನಿಂದ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿತ್ತು.

ಅವರು ಬಳಿಕ ರಿಕ್ಷಾದಲ್ಲಿ ಪತ್ನಿ ಜೊತೆ ಹಣವನ್ನು ಹಿಡಿದುಕೊಂಡು ಆಸ್ಪತ್ರೆಗೆ ತೆರಳಿ ವಾಪಾಸ್ಸು ಸ್ಕೂಟರ್ ಇರುವ ಬಳಿ ಬಂದಿದ್ದಾರೆ.ಈ ವೇಳೆ ಹಣವನ್ನು ಸ್ಕೂಟರ್ ನ ಢಿಕ್ಕಿಯಲ್ಲಿ ಇಡಲು ನೋಡುವಾಗ ಅಪರಿಚಿತ ಬಂದು ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆಂದು ಆರೋಪಿಸಲಾಗಿದೆ.ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!