Tuesday, June 6, 2023
Homeಕರಾವಳಿಚುನಾವಣೆ ಹಿನ್ನೆಲೆ ದ.ಕ.ಜಿಲ್ಲೆಯಿಂದ 11 ಮಂದಿಯನ್ನು 6 ತಿಂಗಳ ಕಾಲ ಗಡಿಪಾರುಗೊಳಿಸಿ ಜಿಲ್ಲಾಧಿಕಾರಿ ಆದೇಶ ಪ್ರಕರಣ;...

ಚುನಾವಣೆ ಹಿನ್ನೆಲೆ ದ.ಕ.ಜಿಲ್ಲೆಯಿಂದ 11 ಮಂದಿಯನ್ನು 6 ತಿಂಗಳ ಕಾಲ ಗಡಿಪಾರುಗೊಳಿಸಿ ಜಿಲ್ಲಾಧಿಕಾರಿ ಆದೇಶ ಪ್ರಕರಣ; ಹಕೀಂ ಕೂರ್ನಡ್ಕ ಅವರ ಗಡಿಪಾರಿಗೆ ಕರ್ನಾಟಕ ಹೈಕೋರ್ಟ್ ತಡೆ‌

- Advertisement -
- Advertisement -

ಮಂಗಳೂರು; ಕೆಲವು ದಿನಗಳ ಹಿಂದೆ ಚುನಾವಣೆ ಹಿನ್ನೆಲೆ 6 ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ 11 ಮಂದಿಯನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಅದರಲ್ಲಿ ಓರ್ವರಾದ  ಹಕೀಂ ಕೂರ್ನಡ್ಕ ಅವರ ಗಡಿಪಾರಿಗೆ ಕರ್ನಾಟಕ ಹೈಕೋರ್ಟ್ ತಡೆ‌ ನೀಡಿದೆ.

ಜಿಲ್ಲಾಧಿಕಾರಿಗಳ ಗಡಿಪಾರು ಆದೇಶವನ್ನು ಪ್ರಶ್ನಿಸಿ ಹಕೀಂ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಗಡಿಪಾರಿಗೆ ಮಧ್ಯಂತರ ತಡೆ ನೀಡಿದ್ದು, ಪೊಲೀಸರಿಗೆ ವಿವರಣೆ ಕೋರಿ ನೊಟೀಸ್ ನೀಡಿದೆ.

ಜಿಲ್ಲೆಯ 6 ಪೊಲೀಸ್ ಠಾಣಾ ವ್ಯಾಪ್ತಿಯ 11 ಮಂದಿಗೆ ಮಾ.6ರಿಂದ ಸೆಪ್ಟಂಬರ್ 6ರವರೆಗೆ ಗಡಿಪಾರು ಮಾಡಲಾಗಿದೆ.ಇದರಲ್ಲಿ ಹಕೀಂ ಅವರ ಗಡಿಪಾರಿಗೆ ಹೈಕೋರ್ಟ್ ತಡೆ ನೀಡಿದೆ.

- Advertisement -

Latest News

error: Content is protected !!