Thursday, June 4, 2026
Homeಕರಾವಳಿಮಂಗಳೂರುಮಂಗಳೂರು ವಿವಿ ಹಣಕಾಸು ಅಶಿಸ್ತಿನ ವಿರುದ್ಧ ರಾಜ್ಯಪಾಲರಿಗೆ ದೂರು:ಮಡಿಕೇರಿಯಲ್ಲಿ ಸಂಸದ ಪ್ರತಾಪಸಿಂಹ ಹೇಳಿಕೆ

ಮಂಗಳೂರು ವಿವಿ ಹಣಕಾಸು ಅಶಿಸ್ತಿನ ವಿರುದ್ಧ ರಾಜ್ಯಪಾಲರಿಗೆ ದೂರು:ಮಡಿಕೇರಿಯಲ್ಲಿ ಸಂಸದ ಪ್ರತಾಪಸಿಂಹ ಹೇಳಿಕೆ

- Advertisement -
- Advertisement -

ಮಡಿಕೇರಿ: ಮಂಗಳೂರು ವಿಶ್ವವಿದ್ಯಾಲಯದ ಹಣಕಾಸು ಆಶಿಸ್ತಿನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

ವಿಶ್ವವಿದ್ಯಾಲಯದ ಹಣಕಾಸು ಅಶಿಸ್ತಿನ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ನಾನು ಪತ್ರ ಬರೆಯುತ್ತೇನೆ ಎಂದು ಪ್ರತಾಪಸಿಂಹ ಹೇಳಿದ್ದಾರೆ.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಇಂದು ಮಾತನಾಡಿದ ಪ್ರತಾಪಸಿಂಹ, ಮಂಗಳೂರು ವಿಶ್ವವಿದ್ಯಾಲಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಯದ್ವಾತದ್ವಾ ಬಿಲ್ಡಿಂಗ್ ಕಟ್ಟುವುದು, ಆ ಮೂಲಕ ಅನಗತ್ಯ ಖರ್ಚುಗಳನ್ನು ತೋರಿಸುವುದು ಎಂದು ಆರೋಪಿಸಿರುವ ಪ್ರತಾಪಸಿಂಹ,
ಕಾಲೇಜು ಅಭಿವೃದ್ಧಿ ಶುಲ್ಕ ದುರುಪಯೋಗವಾಗುತ್ತಿದ್ದು, ಅದಕ್ಕಾಗಿಯೇ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕಳೆದ ಐದು ತಿಂಗಳಿನಿಂದ‌ ಅತಿಥಿ ಉಪನ್ಯಾಸಕರಿಗೆ ವೇತನ ನೀಡದ ಕಾರಣ ಆರು ದಿನಗಳಿಂದ ತರಗತಿ ಬಹಿಷ್ಕರಿಸಿ ಎಫ್ ಎಂಸಿ ಕಾಲೇಜಿನ ಉಪನ್ಯಾಸಕರಿಂದ ಪ್ರತಿಭಟನೆ ನಡೆಯುತ್ತಿದೆ.

- Advertisement -

Latest News

error: Content is protected !!