Saturday, June 6, 2026
Homeಕರಾವಳಿಎಟಿಎಂ ಕೌಂಟರ್ ನೊಳಗೆ ತಾಯಿ ಮತ್ತು ಮಗಳು ಲಾಕ್.. !; ಅಗ್ನಿ ಶಾಮಕ ದಳದಿಂದ ರಕ್ಷಣೆ

ಎಟಿಎಂ ಕೌಂಟರ್ ನೊಳಗೆ ತಾಯಿ ಮತ್ತು ಮಗಳು ಲಾಕ್.. !; ಅಗ್ನಿ ಶಾಮಕ ದಳದಿಂದ ರಕ್ಷಣೆ

- Advertisement -
- Advertisement -

ಕಾಸರಗೋಡು: ಇಲ್ಲಿನ ನಗರವೊಂದರ ಎಟಿಎಂ ಕೌಂಟರ್ ನಲ್ಲಿ ಬಾಗಿಲು ಲಾಕ್ ಆಗಿ ತಾಯಿ ಮತ್ತು ಮಗಳು ಸಿಲುಕಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಚೇರಂಗೈ ನಿವಾಸಿಯ ಮಹಿಳೆ ಮತ್ತು ಆಕೆಯ ಎಂಟು ವರ್ಷದ ಪುತ್ರಿ ನಗರದ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಎಟಿಎಂಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ತನ್ನ ಪುತ್ರಿಯ ಜೊತೆಗೆ ಕೌಂಟರ್ ನೊಳಗೆ ಹಣ ತೆಗೆಯಲು ಹೋಗಿದ್ದು, ಹಣ ಪಡೆದು ವಾಪಸು ಬರುತಿದ್ದಾಗ ಬಾಗಿಲು ಲಾಕ್ ಆಗಿದ್ದು, ಇಬ್ಬರು ಬೊಬ್ಬೆ ಹಾಕಿದ್ದಾರೆ.

ಇದನ್ನು ಗಮನಿಸಿದ ಅಲ್ಲಿದ್ದವರು ಕೂಡಲೇ ಸಮೀಪದ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ತಲಪಿ ಬಳಿಕ ಅಗ್ನಿ ಶಾಮಕ ದಳದವ ರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಎಟಿಎಂ ಕೊಠಡಿಯ ಬಾಗಿಲ ನ್ನು ಯಂತ್ರದ ಮೂಲಕ ತುಂಡರಿಸಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ್ದಾರೆ

- Advertisement -

Latest News

error: Content is protected !!