Monday, May 6, 2024
Homeಕರಾವಳಿಬೆಳ್ತಂಗಡಿ : ವೇಣೂರು ಎರಡು ಕೊರಗಜ್ಜ ಕಟ್ಟೆ ವಿವಾದ ಪ್ರಕರಣ; ದ.ಕ.ಜಿಲ್ಲಾಧಿಕಾರಿ ಹಾಗೂ ಎಸ್ಪಿ ತಂಡದಿಂದ...

ಬೆಳ್ತಂಗಡಿ : ವೇಣೂರು ಎರಡು ಕೊರಗಜ್ಜ ಕಟ್ಟೆ ವಿವಾದ ಪ್ರಕರಣ; ದ.ಕ.ಜಿಲ್ಲಾಧಿಕಾರಿ ಹಾಗೂ ಎಸ್ಪಿ ತಂಡದಿಂದ ಸ್ಥಳ ಪರಿಶೀಲನೆ

spot_img
- Advertisement -
- Advertisement -

ಬೆಳ್ತಂಗಡಿ : ಖಾಸಗಿ ವ್ಯಕ್ತಿ ಮತ್ತು ಸಾರ್ವಜನಿಕರ ಎರಡು ಕೊರಗಜ್ಜ ಕಟ್ಟೆಯ ಪೂಜೆ ಮಾಡುವ ಬಗ್ಗೆ ಎದ್ದಿರುವ ವಿವಾದವಿರುವ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಸ್ಥಳಕ್ಕೆ ನ.15 (ಇಂದು) ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮಹಿಲನ್ ಹಾಗೂ ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡ ಎರಡು ಕಡೆಯ ಕೊರಗಜ್ಜ ಕಟ್ಟೆಯ ಜಾಗವನ್ನು ಪರಿಶೀಲನೆ ನಡೆಸಿದರು‌. ಅಧಿಕಾರಿಗಳ ಜಾಗ ಪರಿಶೀಲನೆ ವೇಳೆ ಸಾರ್ವಜನಿಕರು ಕೂಡ ಜಮಾಯಿಸಿದ್ದರು. ಕೊನೆಗೆ ಅಧಿಕಾರಿಗಳ ಜೊತೆ ಮಾತಾನಾಡಬೇಕಾಗಿ ಪಟ್ಟು ಹಿಡಿದ್ದಿದ್ದು ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು‌. ಬಳಿಕ ಪೊಲೀಸರು ಸಾರ್ವಜನಿಕರನ್ನು ಸ್ಥಳದಿಂದ ಕಳುಹಿಸಿದರು.

ಇನ್ನೂ ಈ ಪ್ರಕರಣದ ಬಗ್ಗೆ ಪೂಜೆ ಮಾಡುವ ಕುರಿತು ಬೆಳ್ತಂಗಡಿ ಆಡಳಿತ ಸೌಧದಲ್ಲಿ ಎರಡು ತಂಡದ 10 ಜನ ಸದಸ್ಯರ ಜೊತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಧ್ಯಾಹ್ನದ ಬಳಿಕ ಸಭೆ ನಡೆಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ , ಪುತ್ತೂರು ಎಸಿ ಗಿರೀಶ್ ನಂದನ್ , ದ.ಕ ಎಸ್ಪಿ ರಿಷ್ಯಂತ್ ,ಬಂಟ್ವಾಳ  ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ , ಬೆಳ್ತಂಗಡಿ ತಹಶಿಲ್ದಾರ್ ಸುರೇಶ್ ಕುಮಾರ್, ಸರ್ವೆ ಇಲಾಖೆ , ಪೊಲೀಸ್ ಇಲಾಖೆ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!