Saturday, June 6, 2026
Homeತಾಜಾ ಸುದ್ದಿಮುಂಬೈನ ಐಷಾರಾಮಿ ಬದುಕಿನ ಆಸೆಗಾಗಿ ಮಗುವನ್ನೇ ಮಾರಿದ ಪಾಪಿ ತಾಯಿ

ಮುಂಬೈನ ಐಷಾರಾಮಿ ಬದುಕಿನ ಆಸೆಗಾಗಿ ಮಗುವನ್ನೇ ಮಾರಿದ ಪಾಪಿ ತಾಯಿ

- Advertisement -
- Advertisement -

ಹೈದರಾಬಾದ್ : ನಮ್ಮ ದೇಶದಲ್ಲಿ ಬಹಳಷ್ಟು ಮಂದಿಯ ಕನಸು ಕನಸಿನ ನಗರಿ ಮುಂಬೈಗೆ ಹೋಗಿ, ಅಲ್ಲಿ ಸುಂದರವಾದ ಬದುಕು ಕಟ್ಟಬೇಕು ಎಂಬುದು. ಅದಕ್ಕಾಗಿ ಏನೇನೋ ಮಾಡುತ್ತಾರೆ ಜನ, ಆದರೆ ಇಲ್ಲೊಬ್ಬ ತಾಯಿ ಕನಸು ನನಸು ಮಾಡಲು ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.

ಹೈದರಾಬಾದ್ ನ ಹಬೀಬ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಮಹಿಳೆ ತನ್ನ ಎರಡು ವರ್ಷದ ಗಂಡು ಮಗುವನ್ನು 45 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು 24 ಗಂಟೆಯಲ್ಲಿ ಮಗುವನ್ನು ರಕ್ಷಿಸಿದ್ದು, ಮತ್ತು ತಾಯಿಯನ್ನು ಬಂಧಿಸಿದ್ದಾರೆ.

22 ವರ್ಷದ ಶೇಖ್ ಜೋಯಾ ಖಾನ್ ಎಂಬ ಮಹಿಳೆ ಪತಿಯೊಂದಿಗೆ ಜಗಳ ಮಾಡಿ, ಒಂಟಿಯಾಗಿ ಬದುಕುತ್ತಿದ್ದಳು. ಮುಂಬೈಗೆ ಹೋಗಬೇಕು ಎಂದು ಕನಸು ಕಾಣುತ್ತಿದ್ದ ಆಕೆಗೆ ಮಗುವನ್ನು ಸಾಕುವುದು ಕಷ್ಟವಾಗಿತ್ತು. ಹೀಗಾಗಿ ಮಗುವನ್ನು ಮಾರಾಟ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಮಾರಾಟ ಮಾಡಿರುವ ವಿಷಯ ತಿಳಿದ ಮಗುವಿನ ತಂದೆ ಅಬ್ದುಲ್ ಮುಜಾಹಿದ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತಾಯಿಯನ್ನು ಮತ್ತು ಮಕ್ಕಳ ಮಾರಾಟ ಮಾಡುತ್ತಿದ್ದ ಮಧ್ಯವರ್ತಿ ಸೇರಿ ಐವರನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!