Friday, May 17, 2024
Homeಕರಾವಳಿನೆರಿಯ: ಎರಡು ಮಕ್ಕಳ ತಾಯಿ ನಗದು ಮತ್ತು ಅಭರಣದ ಜೊತೆ ನಾಪತ್ತೆ!

ನೆರಿಯ: ಎರಡು ಮಕ್ಕಳ ತಾಯಿ ನಗದು ಮತ್ತು ಅಭರಣದ ಜೊತೆ ನಾಪತ್ತೆ!

spot_img
- Advertisement -
- Advertisement -

ಬೆಳ್ತಂಗಡಿ : ನೆರಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಿಳೆ ನಾಪತ್ತೆಯಾಗಿರುವ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿದೇಶದಲ್ಲಿ ಕೆಲಸಕ್ಕಿದ್ದ ರಾಜಿ ಜು.11ರಂದು ನೆರಿಯದ ನಾಯಿಕಟ್ಟೆ ಎಂಬಲ್ಲಿರುವ ಪತಿಯ ಮನೆಗೆ ಮರಳಿದ್ದರು. ಆದರೆ ಆ. 26ರಂದು ರಾತ್ರಿ ಬಳಿಕ ಕಾಣೆಯಾಗಿದ್ದಾರೆ.ಲಭ್ಯ ಮಾಹಿತಿ ಪ್ರಕಾರ, ಆಕೆ ರಾತ್ರಿ ಎಂದಿನಂತೆ ಪತಿಯ ಜೊತೆ ಮಲಗಿದ್ದವರು 11 ಗಂಟೆಯ ಸುಮಾರಿಗೆ ಆಚೆ ಕೋಣೆಯಲ್ಲಿ ಮಲಗಿದ್ದ ಮಗಳ ಜೊತೆ ಮಲಗುವುದಾಗಿ ಹೇಳಿ ಎದ್ದು ಹೋಗಿದ್ದರು. ಆದರೆ ಬೆಳಿಗ್ಗೆ ಐದು ಗಂಟೆಗೆ ಮಗಳು ಎದ್ದು ನೋಡುವ ವೇಳೆ ತಾಯಿ ತನ್ನ ಬಳಿಯೂ ಮಲಗಿರದೆ, ಮನೆಯ್ಲಲೂ ಇಲ್ಲದೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ರಾಜೀ -ಚಿದಾನಂದ ದಂಪತಿಗೆ 11 ವರ್ಷದ ಹೆಣ್ಣು ಮಗಳು, 10 ವರ್ಷದ ಗಂಡು ಮಗ ಇದ್ದಾರೆ.

ಪತಿ ನೀಡಿದ ದೂರಿನಲ್ಲಿ ಆಕೆ ಮನೆಯಿಂದ ಹೊರ ಹೋಗುವಾಗ ತಾಯಿ ಬ್ಯಾಂಕಿನಿಂದ ಸಾಲ‌ಪಡೆದು ತಂದ 1 ಲಕ್ಷ ರೂ. ನಲ್ಲಿ ಉಳಿಕೆ ಇಟ್ಟಿದ್ದ 95000 ಹಾಗೂ ತನ್ನ ತಾಯಿಯ ಎರಡು ಚಿನ್ನದ ಬಳೆಗಳನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ಆಪಾದಿಸಿದ್ದಾರೆ.

ಬಲ್ಲ ಮೂಲಗಳಿಂದ ಸಿಕ್ಕಿದ ಮಾಹಿತಿಯಂತೆ ವಿದೇಶದಲ್ಲಿ ಆಕೆಗೆ ಸಂಬಂಧವೊಂದು ಇದೆ ಎಂಬ ಶಂಕೆ ಇದ್ದು, ಈ ಬಗ್ಗೆ ಇತ್ತೀಚೆಗೆ ಪಂಚಾತಿಕೆ ಕೂಡ ಆಗಿತ್ತು ಎನ್ನಲಾಗಿದೆ. ಒಟ್ಟಾರೆ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಆಕೆ ಮನೆಬಿಟ್ಟು ಹೋಗಿದ್ದು ನಾಪತ್ತೆ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!