Friday, May 17, 2024
Homeಕರಾವಳಿಶಿವಮೊಗ್ಗ: ಸಂಕಷ್ಟದ ಜೀವನ ಸಾಗಿಸುತ್ತಿರುವ ಹತ್ಯೆಗೀಡಾದ ವಿಶ್ವನಾಥ ಶೆಟ್ಟಿ ತಾಯಿ, ಹೊಟ್ಟೆ ಪಾಡಿಗಾಗಿ ಬೀದಿಬೀದಿ ಅಲೆದಾಟ

ಶಿವಮೊಗ್ಗ: ಸಂಕಷ್ಟದ ಜೀವನ ಸಾಗಿಸುತ್ತಿರುವ ಹತ್ಯೆಗೀಡಾದ ವಿಶ್ವನಾಥ ಶೆಟ್ಟಿ ತಾಯಿ, ಹೊಟ್ಟೆ ಪಾಡಿಗಾಗಿ ಬೀದಿಬೀದಿ ಅಲೆದಾಟ

spot_img
- Advertisement -
- Advertisement -

ಶಿವಮೊಗ್ಗ: 2015ರಲ್ಲಿ ಇಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಸ್ಥಾಪನಾ ದಿನಾಚರಣೆಯನ್ನು ಆಯೋಜಿಸಿ ಮೆರವಣಿಗೆ ನಡೆಸಿದ ನಂತರ ನಗರದಲ್ಲಿ ಸಂಭವಿಸಿದ ಗಲಭೆಯಲ್ಲಿ ಸಾವನ್ನಪ್ಪಿದ ವಿಶ್ವನಾಥ ಶೆಟ್ಟಿ, ಈಗ ಅವರ ತಾಯಿ ಬೀದಿ ಬೀದಿಗಳಲ್ಲಿ ಅಲೆದಾಡುತ್ತಿದ್ದಾರೆ.

ಹತ್ಯೆಗೀಡಾದ ವಿಶ್ವನಾಥ ಶೆಟ್ಟಿ ಅವರ ತಾಯಿ ಮೀನಾಕ್ಷಮ್ಮ ಅವರನ್ನು ಸ್ವಂತ ತಾಯಿಯಂತೆ ನೋಡಿಕೊಳ್ಳುತ್ತೇವೆ ಎಂದು ಹಲವಾರು ಜನ ಹೇಳಿದ್ದರು. ಆದರೆ, ಅವರು ಯಾರು ಭರವಸೆಯನ್ನು ಈಡೇರಿಸಿಲ್ಲ ಮತ್ತು ಸಂಕಷ್ಟದಲ್ಲಿರುವ ಮಹಿಳೆಗೆ ಸಹಾಯ ಹಸ್ತ ಚಾಚಿಲ್ಲ.

ಇವರ ಮನೆಗೆ ವಿದ್ಯುತ್ ಸಂಪರ್ಕವಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. 60 ದಾಟಿದ ಮೀನಾಕ್ಷಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿಯನ್ನು ತ್ಯಾಜ್ಯ, ಎಲೆಗಳನ್ನು ಹಾಕಿ ಬೆಂಕಿ ಹಚ್ಚಿ ಅಡುಗೆ ಮಾಡುತ್ತಾರೆ. ಇವರ ಜೀವನವು ಕಷ್ಟಕರವಾಗಿದೆ.

ಕಡು ಬಡತನದ ಸುಳಿಗೆ ಸಿಲುಕಿದ್ದ ವಿಶ್ವನಾಥ ಶೆಟ್ಟಿ ಅವರ ಪತ್ನಿ ಎರಡು ವರ್ಷಗಳ ಹಿಂದೆ ಜಾಂಡೀಸ್‌ನಿಂದ ಮೃತಪಟ್ಟಿದ್ದರು. ಆಕೆಯ ಮಗ ಆದಿರ್ಯ ತನ್ನ ತಾಯಿಯ ತವರು ಕೊಪ್ಪದಲ್ಲಿ ಏಳನೇ ತರಗತಿ ಓದುತ್ತಿದ್ದಾನೆ. ಮಗಳೂ ಅನಾರೋಗ್ಯದಿಂದ ಸಾವನ್ನಪ್ಪಿದ ನಂತರ ಮೀನಾಕ್ಷಮ್ಮ ಒಂಟಿಯಾಗಿ ಅನಾಥಳಾಗಿದ್ದಾರೆ.

ವಿಶ್ವನಾಥ್ ಅವರ ತಾಯಿ ಈಗ ಒಂದು ತುತ್ತು ಅನ್ನಕ್ಕೂ ಪರದಾಡುತ್ತಿದ್ದು, ಸಂಧ್ಯಾ ಸುರಕ್ಷಾ ಮಾಸಿಕ ಪಿಂಚಣಿಯೂ ಸಿಗುತ್ತಿಲ್ಲ.

”ಮಗ ಬದುಕಿದ್ದರೆ ಹೀಗೆ ಇರುತ್ತಿರಲಿಲ್ಲ, ಎರಡು ವರ್ಷ ಪಿಂಚಣಿಗಾಗಿ ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡಿ ವಿಫಲನಾಗಿದ್ದೆ. ಮೂರು ವರ್ಷಗಳ ಹಿಂದೆ ಬಿಲ್ ಪಾವತಿಸದ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ನೀರಿನ ಸಂಪರ್ಕವನ್ನೂ ತೆಗೆದುಕೊಳ್ಳಲಾಗಿದೆ. ಬಿಲ್ ಪಾವತಿಸಲು ಸಾಧ್ಯವಾಗದ ಕಾರಣ ನನ್ನ ಬಳಿ ಗ್ಯಾಸ್ ಸಿಲಿಂಡರ್ ಇಲ್ಲ. ಒಣ ಎಲೆಗಳನ್ನು ಹಾಕಿ ಬೆಂಕಿ ಹಚ್ಚಿ ನಂತರ ಅಕ್ಕಿ ಬೇಯಿಸುತ್ತೇನೆ ಎಂದು ಮೀನಾಕ್ಷಮ್ಮ ಹೇಳಿದ್ದಾರೆ.

ಮಹಿಳೆಯ ದಯನೀಯ ಸ್ಥಿತಿಯ ಬಗ್ಗೆ ತಿಳಿದ ಜೆಡಿಎಸ್ ಮುಖಂಡ ಎಂ ಶ್ರೀಕಾಂತ್ ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಮತ್ತು ಮನೆಗೆ ಬಣ್ಣ ಬಳಿಯಲು ವ್ಯವಸ್ಥೆ ಮಾಡಿದರು. ಮಹಿಳೆಗೆ ಆರಾಮದಾಯಕ ವಾಸ್ತವ್ಯಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಮೂರು ತಿಂಗಳಿಗೆ ಗ್ಯಾಸ್ ಸಂಪರ್ಕ, ಒಲೆ, ಸರಬರಾಜು ವ್ಯವಸ್ಥೆ ಮಾಡಿದ್ದಾರೆ. ಯುವಸೇನೆ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಆಕೆಗೆ ಬೇಕಾದ ವಸ್ತುಗಳನ್ನು ಹಾಗೂ ಔಷಧಗಳನ್ನು ಒದಗಿಸುವ ಜವಾಬ್ದಾರಿಯನ್ನು ಸೇನೆ ವಹಿಸಿಕೊಳ್ಳಲಿದೆ.

ಆದರೆ, ಮೀನಾಕ್ಷಮ್ಮ ಅವರ ಕುಟುಂಬವನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದ ಬಿಜೆಪಿ ಮುಖಂಡರು, ಸಂಘಪರಿವಾರದ ಕಾರ್ಯಕರ್ತರು ಮತ್ತು ಇತರರು ನಂತರ ಎಲ್ಲಿಯೂ ಕಾಣಿಸಿಕೊಂಡಿಲ್ಲ.

- Advertisement -
spot_img

Latest News

error: Content is protected !!