Saturday, June 6, 2026
Homeಕರಾವಳಿಪುತ್ತೂರು: ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯ ಬಂಧನ

ಪುತ್ತೂರು: ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯ ಬಂಧನ

- Advertisement -
- Advertisement -

ಪುತ್ತೂರು: ನಗರದ  ಎರಡು ಸಂಸ್ಥೆಗಳಿಂದ ಬೇರೆ ಬೇರೆ ದಿನಾಂಕಗಳಂದು ಬ್ಯಾಟರಿ ಕಳ್ಳತನ ಮಾಡಿದ ಪ್ರಕರಣದ ಆರೋಪಿಯನ್ನು ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ‌.

ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಇಟ್ಟಿ ಪನ್ನಿಕರ್ ಬಂಧಿತ ಆರೋಪಿ.

ಪುತ್ತೂರು  ನಗರ ವ್ಯಾಪ್ತಿಯಲ್ಲಿ ನಡೆದ ಈ ಸರಣಿ ಕಳ್ಳತನ ಪೊಲೀಸರಿಗೆ ತಲೆ ನೋವು ತಂದಿಟ್ಟಿತ್ತು. ನಗರ ಠಾಣಾ ವ್ಯಾಪ್ತಿಯ ದರ್ಬೆ ಬಳಿಯ ಹಿತ ಆಸ್ಪತ್ರೆ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಶ್ರೀ ಸಾಯಿ ಲಾಡ್ಜ್ ನಿಂದ ಜನರೇಟರ್ ಕದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಇದರಲ್ಲಿ ಹಿತ ಆಸ್ಪತ್ರೆಯಲ್ಲಿ ಬ್ಯಾಟರಿ ಕಳ್ಳತನ ನಡೆಸಿರುವ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ .

ಪುತ್ತೂರು ನಗರ ಠಾಣೆ ಪಿ.ಎಸ್.ಐ.ನೇತೃತ್ವದಲ್ಲಿ ಪತ್ತೆ ಮಾಡಿ ದಸ್ತಗಿರಿ ಮಾಡಿ, ಸೊತ್ತು ವಶಪಡಿಸಿಕೊಂಡು ಈ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.

- Advertisement -

Latest News

error: Content is protected !!