- Advertisement -
- Advertisement -
ಕೇರಳ: ಬಿಜೆಪಿ ಸ್ಥಳೀಯ ಮಹಿಳಾ ಮೋರ್ಚಾದ ನಾಯಕಿ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪಾಲಕ್ಕಾಡ್ ಜಿಲ್ಲೆಯ ಮಟ್ಟುಮಂಥ ಎಂಬಲ್ಲಿ ನಡೆದಿದೆ.
ಬಿಜೆಪಿ ಮಹಿಳಾ ಮೋರ್ಚಾದ ನಾಯಕಿ ಶರಣ್ಯಾ (27) ಮೃತಪಟ್ಟವರು.
ಶರಣ್ಯಾ ಬಿಜೆಪಿಯ ಮಹಿಳಾ ಘಟಕವಾದ ಮಹಿಳಾ ಮೋರ್ಚಾದ ಪಾಲಕ್ಕಾಡ್ ಮಂಡಲದ ಕೋಶಾಧಿಕಾರಿಯಾಗಿದ್ದರು. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶರಣ್ಯಾ ಮೃತದೇಹದ ಬಳಿ ಡೆತ್ ನೋಟು ಕೂಡ ಸಿಕ್ಕಿದೆ.ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
- Advertisement -