Saturday, May 18, 2024
Homeಕರಾವಳಿಬೆಳ್ತಂಗಡಿ; ಮೈರೋಳ್ತಡ್ಕದಲ್ಲಿ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಬೆಳ್ತಂಗಡಿ; ಮೈರೋಳ್ತಡ್ಕದಲ್ಲಿ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

spot_img
- Advertisement -
- Advertisement -

ಬೆಳ್ತಂಗಡಿ; ಬಂದಾರು ಗ್ರಾಮದ ಸದಾಶಿವ ಯುವಕ ಮಂಡಲ (ರಿ.) ದಿವ್ಯಶ್ರೀ ಮಹಿಳಾ ಮಂಡಲ (ರಿ.)ಮೈರೋಳ್ತಡ್ಕ  ಇವುಗಳ ಸಂಯುಕ್ತ  ಆಶ್ರಯದಲ್ಲಿ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜ ಶುಭ ಹಾರೈಸಿದರು.

ಕಾರ್ಯಕ್ರಮದ‌ ಉದ್ಘಾಟನೆಯನ್ನು ಶ್ರೀ ಕುರಾಯ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕರಾದ ‌ಮಹೇಶ್ ಭಟ್ ಹಾಗೂ ಮಲ್ಲಕಂಭದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ  ಧರ್ಣಪ್ಪ ಗೌಡ ಬಾನಡ್ಕ ಇವರು ನೇರವೆರಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ವಿಜೇತರಾದ ಮೈರೋಳ್ತಡ್ಕ ಚಾಕೋಟೆದಡಿ  ಪ್ರೇಮಲತಾ ಮತ್ತು ಗಣೇಶ್ ದಂಪತಿಗಳ ಪುತ್ರ ಯಜ್ಞೇಶ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ‌ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ‌ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ,ಬಂದಾರು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ‌ಪರಮೇಶ್ವರಿ ಕೆ.ಗೌಡ, ಗ್ರಾ.ಪಂ ಸದಸ್ಯರಾದ ದಿನೇಶ್ ಗೌಡ ಖಂಡಿಗ,ಬಾಲಕೃಷ್ಣ ಗೌಡ ಮುಗೇರಡ್ಕ, ಶ್ರೀಮತಿ ಸುಚಿತ್ರಾ‌  ಮುರ್ತಾಜೆ, ಯುವಕ ಮಂಡಲದ ಅಧ್ಯಕ್ಷರಾದ ದಯಾನಂದ ಗೌಡ,ಕಾರ್ಯದರ್ಶಿ ಶಿವಪ್ರಸಾದ್ ಚಾಕೋಟೆದಡಿ,ಶೀನಪ್ಪ ಗೌಡ, ಮಹೇಶ್, ಮೋಹನ್ ಗೌಡ ಗುಂಡಿಕಂಡ,ಪದ್ಮನಾಭ ಗೌಡ,ಉದಯ ಗೌಡ ಎಂ.ಸಿ.ಕೆ,ರಾಜೇಶ್,ರಾಘವೇಂದ್ರ, ಚೇತನ್,ಸುಂದರ,ಜಯಪ್ರಕಾಶ್,ಲೋಹಿತ್,ನಿಶಾಂತ್ ,ತಿಮ್ಮಪ್ಪ ಅಬ್ಬನೊಕ್ಕು,ಸತೀಶ್ ಸಾಲ್ಮರ,ಯಶೋದರ ಮುಂಡೂರು,ದೀಕ್ಷಿತ್ ಮೈರೋಳ್ತಡ್ಕ ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ  ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಿತು. ಶ್ರೀದೇವಿ ಆಟ್ಯಾಕರ್ಸ್ ಪ್ರಥಮ ಸ್ಥಾನಿಯಾದರೆ, ದ್ವೀತಿಯ ಸ್ಥಾನವನ್ನು ಖಂಡಿಗ ಪ್ರೆಂಡ್ಸ್  ಪಡೆದರು. ಪಂದ್ಯಾಟದ ತೀರ್ಪುಗಾರರಾಗಿ ದೈಹಿಕ ಶಿಕ್ಷಕರಾದ ಪ್ರವೀಣ್ ಅಲೆಕ್ಕಿ,ಕೊಯ್ಯೂರು, ಹಾಗೂ ದೈಹಿಕ ಶಿಕ್ಷಕರಾದ ಚಂದ್ರಶೇಖರ  ಖಂಡಿಗ ಸಹಕರಿಸಿದರು.

- Advertisement -
spot_img

Latest News

error: Content is protected !!