Wednesday, August 5, 2026
Homeಕರಾವಳಿಬೆಳ್ತಂಗಡಿ ಮಂಡಲದ ಭಾರತೀಯ ಜನತಾ ಪಾರ್ಟಿಯಿಂದ ತಿಂಗಳ ಸಂಘಟನಾ ಸಭೆ

ಬೆಳ್ತಂಗಡಿ ಮಂಡಲದ ಭಾರತೀಯ ಜನತಾ ಪಾರ್ಟಿಯಿಂದ ತಿಂಗಳ ಸಂಘಟನಾ ಸಭೆ

- Advertisement -
- Advertisement -

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ತಿಂಗಳ ಸಂಘಟನಾ ಸಭೆ ಪಿನಾಕಿ ಸಭಾ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳು, ಎಸ್ ಐ ಆರ್ ನ ಕುರಿತು ಚರ್ಚಿಸಲಾಯಿತು. ಶಾಸಕರಾದ ಶ್ರೀ ಹರೀಶ್ ಪೂಂಜರವರು ಮಾತಾಡಿ ಪಕ್ಷ ಸಂಘಟನೆ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಮಾರ್ಗದರ್ಶನ ಮಾಡಿದರು. ಸಂಘಟನಾತ್ಮಕ ವಿಷಯಗಳನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್ ತಿಳಿಸಿದರು.

ಈ ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ವಸಂತಿ ಮಚ್ಚಿನ, ಜಿಲ್ಲಾ ಮನ್ ಕಿ ಬಾತ್ ಪ್ರಮುಖ್ ಸೀತಾರಾಮ್ ಬಿ‌.ಎಸ್, ಮಂಡಲ‌ ಅಧ್ಯಕ್ಷರಾದ ಶ್ರೀನಿವಾಸ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ ಹಾಗೂ ಮಂಡಲ‌ ಪದಾಧಿಕಾರಿಗಳು, ಜಿಲ್ಲಾ ವಿವಿಧ ಪದಾಧಿಕಾರಿಗಳು ಮಹಾಶಕ್ತಿ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಶಕ್ತಿಕೇಂದ್ರ ಪ್ರಮುಖರುಗಳು ಉಪಸ್ಥಿತರಿದ್ದರು.

ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಸ್ವಾಗತಿಸಿದರು, ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಪೂರ್ಣಿಮಾ ಜಯಂತ್ ಧನ್ಯವಾದ ತಿಳಿಸಿ, ಅರವಿಂದ ಲಾಯಿಲ ನಿರೂಪಣೆ ಮಾಡಿದರು.

- Advertisement -

Latest News

error: Content is protected !!