Thursday, June 4, 2026
Homeತಾಜಾ ಸುದ್ದಿಮಹಿಳೆ ಮನೆಯಲ್ಲಿ ಕೂಡಿಟ್ಟ 25 ಸಾವಿರ ಹಣವನ್ನು ಕದ್ದವರ್ಯಾರು ಗೊತ್ತಾ?

ಮಹಿಳೆ ಮನೆಯಲ್ಲಿ ಕೂಡಿಟ್ಟ 25 ಸಾವಿರ ಹಣವನ್ನು ಕದ್ದವರ್ಯಾರು ಗೊತ್ತಾ?

- Advertisement -
- Advertisement -

ತಮಿಳುನಾಡು : ಮಂಗಗಳ ಗುಂಪೊಂದು ಮಹಿಳೆಯೊಬ್ಬರ ಮನೆಗೆ ನುಗ್ಗಿ, ಅವರು ಕೂಡಿಟ್ಟಿದ್ದ 25,000 ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ತಮಿಳು ನಾಡಿನ ತಂಜಾವೂರಿನ ತಿರುವೈಯಾರುವಿನಲ್ಲಿ ನಡೆದಿದೆ.

ಇಲ್ಲಿನ ವೀರಮಾಂಗುಡಿ ಗ್ರಾಮದ ಕುತಿರಾಯ್‌ ಕೋವಿಳ್‌ ಬೀದಿಯಲ್ಲಿನ ಗುಡಿಸಲೊಂದರಲ್ಲಿ ವಾಸಿಸುವ ಶರತಾಂಬಳ್ ಹೆಸರಿನ ಮಹಿಳೆಯೊಬ್ಬರು ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೋತಿಗಳು ಗುಡಿಸಲೊಳಗೆ ಬಂದು ಬಕೆಟ್‌ನಲ್ಲಿ ಇಟ್ಟಿದ್ದ ಅಕ್ಕಿಯ ಬ್ಯಾಗ್‌ ಹಾಗೂ ಬಾಳೆಹಣ್ಣುಗಳನ್ನು ದೋಚಿಕೊಂಡು ಹೋಗಿವೆ.

ಆ ಅಕ್ಕಿ ಬ್ಯಾಗ್‌ನಲ್ಲಿ ಮಹಿಳೆ ತನ್ನ ಜೀವಿತದ ಉಳಿತಾಯ ಹಾಗೂ ಚಿನ್ನವನ್ನು ಇಟ್ಟಿದ್ದರು. ಕೋತಿಗಳನ್ನು ಸ್ಥಳೀಯರು ಬೆನ್ನಟ್ಟಿದಾಗ ಅವುಗಳು ಬ್ಯಾಗ್‌ನೊಂದಿಗೆ ಅಲ್ಲಿಂದ ಪರಾರಿಯಾಗಿವೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿ ಬಹಳ ಕಷ್ಟಪಟ್ಟು ಈ ಹಣವನ್ನು ಶರತಂಬಾಳ್ ಕೂಡಿಟ್ಟಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

- Advertisement -

Latest News

error: Content is protected !!