Saturday, June 6, 2026
Homeಪ್ರಮುಖ-ಸುದ್ದಿಕೊರೊನಾದಿಂದ ಪತಿ ಸಾವು, ಅವಮಾನ ತಾಳಲಾರದೇ ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆ

ಕೊರೊನಾದಿಂದ ಪತಿ ಸಾವು, ಅವಮಾನ ತಾಳಲಾರದೇ ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆ

- Advertisement -
- Advertisement -

ಆಂಧ್ರಪ್ರದೇಶ : ಪತಿ ಕೊರೊನಾ ವೈರಸ್ ನಿಂದ ಸಾವನ್ನಪ್ಪುತ್ತಿದ್ದಂತೆ ನೆಂಟರು, ಬಂಧು ಮಿತ್ರರು ದೂರಮಾಡಿದ್ರು ಅನ್ನೋ ಕಾರಣಕ್ಕೆ ಅವಮಾನ ತಾಳಲಾರದೇ ಪತ್ನಿ ಹಾಗೂ ಮಕ್ಕಳು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ನಾಲ್ಕು ದಿನಗಳ ಹಿಂದೆ ಕರೋನ್ ವೈರಸ್ ಸೋಂಕಿಗೆ ಒಳಗಾದ 52 ವರ್ಷದ ನರಸಯ್ಯ ಸಾವನ್ನಪ್ಪಿದ್ದರು, ನಂತರ ಅವರ ಸಂಬಂಧಿಕರು ಮತ್ತು ಸ್ನೇಹಿತರು ಸಾಂತ್ವನ ಹೇಳದೆ, ದೂರ ಮಾಡಿದ ಹಿನ್ನೆಲೆಯಲ್ಲಿ ಅವಮಾನದಿಂದ ಇಡೀ ಕುಟುಂಬದವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ಪರಿಮಿ ಸುನೀತಾ (50) , ನರಸಯ್ಯ ಫಣಿಕುಮಾರ್ (25) ಮತ್ತು ಮಗಳು ಲಕ್ಷ್ಮಿ ಅಪರ್ಣಾ (23) ನಿನ್ನೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಸೇತುವೆಗೆ ಬಂದಿದ್ದ ಕಾರಿನಿಂದ ಪೊಲೀಸರು ಡೆತ್ ನೋಟನ್ನು ವಶಪಡಿಸಿಕೊಂಡಿದ್ದಾರೆ. ಡೆತ್ ನೋಟಿನಲ್ಲಿ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!