Friday, June 5, 2026
Homeಕರಾವಳಿಮಂಗಳೂರು ಹೊರವಲಯದಲ್ಲಿ ಆತಂಕ ಸೃಷ್ಟಿಸಿದ ಒಂಟಿ ಕೋತಿ

ಮಂಗಳೂರು ಹೊರವಲಯದಲ್ಲಿ ಆತಂಕ ಸೃಷ್ಟಿಸಿದ ಒಂಟಿ ಕೋತಿ

- Advertisement -
- Advertisement -

ಮಂಗಳೂರು: ಮಂಗಳೂರು ನಗರದ ಹೊರ ವಲಯದಲ್ಲಿ ಕೋತಿಯೊಂದು ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ಒಂಟಿ ಕೋತಿಯ ದಾಳಿಗೆ ಹೆದರಿ ಮನೆಯಿಂದ ಹೊರಬರಲು ಮಂಗಳೂರು ತಾಲೂಕಿನ ಕುಪ್ಪೆಪದವಿನ ನೆಲ್ಲಿಜೋರ ಪ್ರದೇಶದ ಜನರು ಭಯಪಡುವಂತಾಗಿದೆ.

ನೆಲ್ಲಿಜೋರ ಪ್ರದೇಶ ಮೂರ್ನಾಲ್ಕು ಕುಟುಂಬದ ಮಹಿಳೆಯರು ಹಾಗೂ ಲುಂಗಿ ತೊಟ್ಟವರನ್ನು ಮಾತ್ರ ಕೋತಿ ಟಾರ್ಗೆಟ್ ಮಾಡುತ್ತಿದೆ ಎಂದು ಹೇಳಲಾಗಿದೆ. ಕೋತಿ ದಾಳಿಯಿಂದಾಗಿ ಮಹಿಳೆಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕೋತಿ ಸೆರೆ ಹಿಡಿಯುವ ವಿಚಾರದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪ ವ್ಯಕ್ತವಾಗಿದ್ದು, ಕೈಯಲ್ಲಿ ದೊಣ್ಣೆ ಹಿಡಿದು ಆತಂಕದಲ್ಲಿ ಜನರು ಓಡಾಟ ನಡೆಸುವಂತಾಗಿದೆ.

- Advertisement -

Latest News

error: Content is protected !!