Monday, June 29, 2026
Homeಅಪರಾಧಬೆಳ್ತಂಗಡಿ : ಹಾಡುಹಗಲೆ ಗ್ರಾನೈಟ್ ಅಂಗಡಿಗೆ ನುಗ್ಗಿ ಹಣ ಕಳ್ಳತನ.

ಬೆಳ್ತಂಗಡಿ : ಹಾಡುಹಗಲೆ ಗ್ರಾನೈಟ್ ಅಂಗಡಿಗೆ ನುಗ್ಗಿ ಹಣ ಕಳ್ಳತನ.

- Advertisement -
- Advertisement -

ಬೆಳ್ತಂಗಡಿ : ಹಾಡುಹಗಲೆ ಅಂಗಡಿಯಲ್ಲಿ ಯಾರು ಇಲ್ಲದ ವೇಳೆ ಅಂಗಡಿಯೊಳಗೆ ನುಗ್ಗಿ ಕ್ಯಾಶ್ ಕೌಂಟರಿಗೆ ಸ್ಕ್ರೂ ಡ್ರೈವರ್ ರೀತಿಯ ವಸ್ತು ಬಳಸಿ ಓಪನ್ ಮಾಡಿ ಸುಮಾರು 50 ಸಾವಿರ ದಿಂದ 55 ಸಾವಿರ ವರೆಗೆ ಹಣ ದೋಚಿರುವ ಘಟನೆ ಲಾಯಿಲ ಗ್ರಾಮದ ಕಾಶಿಬೆಟ್ಟಿ ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಾಶಿಬೆಟ್ಟು ಭಗವಾನ್ ಶ್ರೀ ಶನೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಕಿಶೋರ್ ಎಂಬವರ ಜಾಗವನ್ನು ಲೀಜ್ ಗೆ ರಾಜಸ್ಥಾನ ಮೂಲದ ರೂಪ್ ಕಿಶೋರ್ ಪಡೆದು ಶ್ರೀ ರಾಮ್ ಗ್ರಾನೈಟ್& ಟೈಲ್ಸ್‌ ಎಂಬ ಹೆಸರಿನಲ್ಲಿ ಒಂದು ವರ್ಷದಿಂದ ವ್ಯವಹಾರ ನಡೆಸುತ್ತಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ಅಂಗಡಿ ಮಾಲಕ ರೂಪ್ ಕಿಶೋರ್ ಉಜಿರೆಗೆ ಹೋಗಿದ್ದು ಈ ವೇಳೆ ಅಂಗಡಿಯಲ್ಲಿ ಯಾರು ಇರಲ್ಲಿಲ್ಲ ಹಣ ಇರುವ ಕೌಂಟರ್ ಬಾಕ್ಸ್ ಗೆ ಬಿಗ ಹಾಕಿ ಹೋಗಿದ್ದರು. ವಾಪಸ್ ಬಂದು ಕ್ಯಾಸ್ ಬಾಕ್ಸ್ ಓಪನ್ ಅಗಿ ಹಣ ನಾಪತ್ತೆಯಾಗಿತ್ತು. ನಂತರ ಅಲ್ಲಿಯೆ ಎದುರು ಇದ್ದ ಆಟೋ ಚಾಲಕನ ಬಳಿ ವಿಚಾರ ತಿಳಿಸಿದಾಗ ಆ ವೇಳೆ ಇಬ್ಬರು ವ್ಯಕ್ತಿಗಳು ಓಡಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಮಾಲಕ ಕಿಶೋರ್ ಮತ್ತು ರೂಪ್ ಕಿಶೋರ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ‌.

- Advertisement -

Latest News

error: Content is protected !!