Wednesday, June 3, 2026
HomeUncategorizedಬೆಂಗಳೂರು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣ; ಬಂಟ್ವಾಳ ಬೊಳಂತೂರು ನಿವಾಸಿ ಮಹಮ್ಮದ್ ತಪ್ಸೀರ್ ನನ್ನು ವಶಕ್ಕೆ ಪಡೆದ...

ಬೆಂಗಳೂರು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣ; ಬಂಟ್ವಾಳ ಬೊಳಂತೂರು ನಿವಾಸಿ ಮಹಮ್ಮದ್ ತಪ್ಸೀರ್ ನನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಬಂಟ್ವಾಳ; ರಾಜ್ಯದಲ್ಲಿ ಸಂಚಲನ ಮೂಡಿಸಿದ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಬೊಳಂತೂರು ನಿವಾಸಿ ಮಹಮ್ಮದ್ ತಪ್ಸೀರ್ ಎಂಬಾತನ್ನು ಪೋಲೀಸರು ದೀರ್ಘಕಾಲದ ವಿಚಾರಣೆ ಬಳಿಕ ವಶಕ್ಕೆ ಪಡೆದು, ಬೆಂಗಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಟ್ವಾಳ ತಾಲೂಕಿನ ಬೊಳಂತೂರು ನಿವಾಸಿ ಮಹಮ್ಮದ್ ತಪ್ಸೀರ್ ನನ್ನು ಬಂಟ್ವಾಳ , ವಿಟ್ಲ ಪೋಲೀಸರು ಇಂದು ಬೆಳಗ್ಗೆ ಸುಮಾರು  11.35 ರ ವೇಳೆ ವಶಕ್ಕೆ ಪಡೆದು ಬಂಟ್ವಾಳಕ್ಕೆ ಕರೆತಂದಿದ್ದಾರೆ. ಆ ಬಳಿಕ ರಾಜ್ಯ ಪೋಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ವರ್ಷ ಬೆಂಗಳೂರಿನ ಕೆ.ಜೆ.ಡಿ.ಜೆ.ಹಳ್ಳಿಯಲ್ಲಿ ಅಖಂಡ ಶ್ರೀನಿವಾಸ ಅವರ ಮನೆಗೆ ದಾಂಧಲೆ ನಡೆಸಿ ಆ ಬಳಿಕ ಪೋಲಿಸ್ ಠಾಣೆಗೆ ನುಗ್ಗಿಲು ಪ್ರಯತ್ನಿಸಿ ಸಾಕಷ್ಟು ಹಾನಿ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪೋಲೀಸರ ತಂಡ ತನಿಖೆ ನಡೆಸುತ್ತಿತ್ತು .


ಕೆ.ಜೆ.ಹಳ್ಳಿ ಡಿ.ಜೆ ಹಳ್ಳಿ ಪ್ರಕರಣಕ್ಕೆ ಆರಂಭದಲ್ಲಿ ಯೋಜನೆ ರೂಪಿಸಿದ ತಂಡದ ಜೊತೆಗೆ ಈತ ನಿರಂತರವಾಗಿ ಸಂಪರ್ಕವನ್ನು ಇರಿಸಿಕೊಂಡಿದ್ದ ಎಂಬ ಆರೋಪದಲ್ಲಿ ಈತನ ಮನೆಗೆ ದಾಳಿ ನಡೆಸಲಾಗಿದೆ. ಈತ  ತಪ್ಸೀರ್ ಪಿ.ಎಫ್.ಐ‌.ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ. ಈತ ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತಿಸಿ ಕೊಂಡಿದ್ದ ಎನ್ನಲಾಗಿದೆ. ಪ್ರಸ್ತುತ ಈತ ಉದ್ಯಮ ನಡೆಸುತ್ತಿದ್ದು,ಬೋಳಂತರಿನಲ್ಲಿ ವಾಸವಾಗಿದ್ದ.

- Advertisement -

Latest News

error: Content is protected !!