ನವದೆಹಲಿ :ಭಾರತ ದೇಶದಲ್ಲಿ ಕೋವಿಡ್ ಲಾಕ್‌ಡೌನ್-2 ಮೇ.3 ಕ್ಕೆ ಮುಕ್ತಾಯವಾಗಲಿದೆ. ಹೀಗಿರುವಾಗ ಲಾಕ್‌ಡೌನ್ ತೆರವು ಮಾಡಬೇಕೆ, ಬೇಡವೇ ಎಂಬ ಬಗ್ಗೆ ತಜ್ಞರ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.ಈ ನಡುವೆ ಕೋವಿಡ್ 19 ಸೋಂಕನ್ನು ನಿತಂತ್ರಿಸಲು ಹಾಗೂ ಲಾಕ್‌ಡೌನ್‌ನಿಂದ ಹೊರಬರಲು ಹಾಂಗ್‌ಕಾಂಗ್ ಮಾದರಿ ಅನುಸರಿಸುವುದು ಉತ್ತಮ ಎಂಬ ಮಾತುಗಳೂ ವ್ಯಕ್ತವಾಗಿದೆ.ಲಾಕ್‌ಡೌನ್-೨ ತೆರವಾದ ನಂತರವೂ ಹಾಟ್‌ಸ್ಪಾಟ್‌ಗಳಲ್ಲಿ ಮಾತ್ರ ಈಗಿರುವಂಥ ಎಲ್ಲ ನಿರ್ಬಂಧಗಳೂ ಮುಂದುವರಿಯಲಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಮೇ 3 ರಂದು ಲಾಕಕ್ ಡೌನ್ -2 ಮುಕ್ತಾಯವಾಗಲಿದ್ದು ಪ್ರಧಾನಿ ಮೋದಿ ಮತ್ತೊಮ್ಮೆ ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೇ 2 ರ ಶನಿವಾರ ಇಲ್ಲವೇ ಮೇ 3 ಭಾನುವಾರ ಮೋದಿ ಭಾಷಣ ಮಾಡಲಿದ್ದು ಲಾಕ್ಡೌನ್ ಮುಂದುವರಿಸಬೇಕೇ ಬೇಡವೇ ಎಂದು ಘೋಷಣೆ ಮಾಡುವ ಸಾಧ್ಯತೆ ಇದೆ.ರೆಡ್ ಜೋನ್ ಮತ್ತು ಹಾಟ್‌ಸ್ಪಾಟ್‌ಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿರುವ ಕುರಿತು ಗಮನ ಹರಿಸಬೇಕಾದ ಚಿಂತೆ ಕೇಂದ್ರ ಸರಕಾರವನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಹಾಂಗ್‌ಕಾಂಗ್ ಮಾದರಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಹಾಂಗ್‌ಕಾಂಗ್ ಮಾದರಿ:
ಇತರ ದೇಶಗಳಂತೆ ಲಾಕ್‌ಡೌನ್ ಜಾರಿಗೊಳಿಸದೆ, ಕೊರೊನ ಸೋಂಕಿತರನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚುವುದು, ಸೋಂಕಿತರ ಸಂಪರ್ಕಕ್ಕೆ ಒಳಗಾದವರ ಕಟ್ಟುನಿಟ್ಟಿನ ಕ್ವಾರೆಂಟೈನ್ ಮತ್ತು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ; ಈ ರೀತಿಯ ಮೂರು ಅಂಶಗಳ ಕಾರ್ಯಕ್ರಮದ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟುವುದೇ ಹಾಂಗ್‌ಕಾಂಗ್ ಮಾದರಿ.
ಈಗಾಗಲೇಗೆ ವಿಡಿಯೋ ಸಂವಾದ ಮೂಲಕ ಮುಖ್ಯಮಂತ್ರಿಗಳೊಂದಿ ಚರ್ಚೆ ಸವೆಸಿರುವ ಪ್ರಧಾನಿ ಲಾಕ್ಡೌನ್ ಮುಂದುವರೆಸುವ ಕುರಿತು ತೀರ್ಮಾನ ಕೈಗೊಳ್ಳಲು ಸಲಹೆ ನೀಡಿದ್ದಾರೆ. ಅನೇಕ ರಾಜ್ಯಗಳಲ್ಲಿ ಈಗಾಗಲೇ ಮೇ 7, ಮೇ 15 ರವರೆಗೂ ಲಾಕ್ ಡೌನ್ ಮುಂದುವರಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಗೃಹ ಮಂತ್ರಾಲಯ ಮಾರ್ಗಸೂಚಿ ಬಿಡುಗಡೆ ಮಾಡಿ ಸೋಂಕು ಇಲ್ಲದ ಪ್ರದೇಶಗಳಿಗೆ ಮತ್ತು ವಲಸಿಗರಿಗೆ ವಿನಾಯಿತಿ ನೀಡಿದೆ. ಇನ್ನಷ್ಟು ನಿರ್ಬಂಧ ಸಡಿಲಿಕೆ ಮಾಡಲಾಗುವುದು. ಇಲ್ಲವೇ ಷರತ್ತುಗಳೊಂದಿಗೆ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ಮಾಡಬಹುದೆಂದು ಹೇಳಲಾಗಿದೆ.