Thursday, May 9, 2024
Homeತಾಜಾ ಸುದ್ದಿಬೆಂಗಳೂರಿನಲ್ಲಿ ಏಷ್ಯಾದ ಅತೀ ದೊಡ್ಡ ಏರ್ ಶೋಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

ಬೆಂಗಳೂರಿನಲ್ಲಿ ಏಷ್ಯಾದ ಅತೀ ದೊಡ್ಡ ಏರ್ ಶೋಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

spot_img
- Advertisement -
- Advertisement -

ಬೆಂಗಳೂರಿನಲ್ಲಿ ಏಷ್ಯಾದ ಅತೀ ದೊಡ್ಡ ಏರ್ ಶೋಗೆ ಇಂದಿನಿಂದ ಆರಂಭವಾಗಲಿದೆ. ಈ ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಫೆಬ್ರವರಿ 13 ರಿಂದ 15 ರವರೆಗೆ ಏರ್ ಶೋ ನಡೆಯಲಿದ್ದು, 16 ಮತ್ತು 17 ರಂದು ಸಾರ್ವಜನಿಕರಿಗೆ  ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮವು ರಕ್ಷಣಾ ಮಂತ್ರಿಗಳ ಸಮಾವೇಶವನ್ನು ಒಳಗೊಂಡಿದೆ.

 ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ಸುಮಾರು 35,000 ಚದರ ಮೀಟರ್ ಪ್ರದೇಶದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ 98 ದೇಶಗಳು ಭಾಗವಹಿಸುವ ಸಾಧ್ಯತೆಯಿದೆ. 32 ದೇಶಗಳ ರಕ್ಷಣಾ ಸಚಿವರು, 29 ದೇಶಗಳ ವಾಯುಪಡೆ ಮುಖ್ಯಸ್ಥರು ಮತ್ತು ಜಾಗತಿಕ ಮತ್ತು ಭಾರತೀಯ ಒಇಎಂಗಳ 73 ಸಿಇಒಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಎಂಎಸ್‌ಎಂಇಗಳು ಮತ್ತು ನವೋದ್ಯಮಗಳು ಸೇರಿದಂತೆ ಎಂಟುನೂರ ಒಂಬತ್ತು (809) ರಕ್ಷಣಾ ಕಂಪನಿಗಳು ಪ್ರಮುಖ ತಂತ್ರಜ್ಞಾನಗಳ ಪ್ರಗತಿ ಮತ್ತು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಬೆಳವಣಿಗೆಯನ್ನು ಪ್ರದರ್ಶಿಸಲಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!