Tuesday, May 7, 2024
Homeತಾಜಾ ಸುದ್ದಿನವೆಂಬರ್‌ ಅಂತ್ಯದವರೆಗೆ ಉಚಿತ ಪಡಿತರ ವಿತರಣೆ: ಪ್ರಧಾನಿ ಮೋದಿ ಮಹತ್ವದ ಘೋಷಣೆ

ನವೆಂಬರ್‌ ಅಂತ್ಯದವರೆಗೆ ಉಚಿತ ಪಡಿತರ ವಿತರಣೆ: ಪ್ರಧಾನಿ ಮೋದಿ ಮಹತ್ವದ ಘೋಷಣೆ

spot_img
- Advertisement -
- Advertisement -

ನವದೆಹಲಿ : ಪ್ರಪಂಚದಾದ್ಯಂತದ ಇತರ ದೇಶಗಳಿಗೆ ಹೋಲಿಸಿದರೆ, ಕೊರೋನಾ ವಿರುದ್ಧದ ಯುದ್ಧದಲ್ಲಿ ಭಾರತ ಇನ್ನೂ ಸ್ಥಿರ ಸ್ಥಿತಿಯಲ್ಲಿದೆ. ಸಮಯೋಚಿತ ನಿರ್ಧಾರಗಳು ಮತ್ತು ಕ್ರಮಗಳು ದೊಡ್ಡ ಪಾತ್ರವನ್ನು ವಹಿಸಿವೆ ಅಂತ ಪ್ರಧಾನಿ ಮೋದಿಯವರು ಹೇಳಿದ್ದಾರೆ.

ಅವರು ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು, ಇದೇ ವೇಳೆ ಅವರು ಮಾತನಾಡಿ ನಾವು ಆನ್ ಲಾಕ್ 2 ಅನ್ನು ಪ್ರವೇಶಿಸುತ್ತಿದ್ದೇವೆ. ಇದಲ್ಲದೇ ಈ ಸಮಯದಲ್ಲಿ ತಮ್ಮನ್ನು ತಾವು ನೋಡಿಕೊಳ್ಳಬೇಕೆಂದು ನಾನು ದೇಶವಾಸಿಗಳನ್ನು ಕೋರುತ್ತೇನೆ ಅಂತ ಹೇಳಿದರು.

ಭಾಷಣದಲ್ಲಿ ಪ್ರಮುಖವಾಗಿ ಗರೀಬ್ ಕಲ್ಯಾಣ್ ಯೋಜನೆಯನ್ನು ಮುಂದುವರಿಸುವ ಕುರಿತು ಮಾತನಾಡಿದ್ದು, ನವೆಂಬರ್ ವರೆಗೂ ಉಚಿತ ರೇಷನ್ ವಿತರಿಸುವುದಾಗಿ ಅವರು ತಿಳಿಸಿದರು. ಪ್ರತಿ ತಿಂಗಳು ಓರ್ವ ವ್ಯಕ್ತಿಗೆ 5ಕೆಜಿ ಗೋಧಿ ಅಥವಾ ಅಕ್ಕಿ ಜೊತೆಗೆ ಒಂದು ಕೆಜಿ ಬೇಳೆಕಾಳು ಉಚಿತವಾಗಿ ನೀಡಲು ನಿರ್ದರಿಸಿದ್ದು ಇದರಿಂದ ಬೊಕ್ಕಸಕ್ಕೆ 90 ಸಾವಿರ ಕೋಟಿ ಹೊರೆಯಾಗಲಿದೆ. ಜೊತೆಗೆ 80 ಕೋಟಿ ಬಡವರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದವರು ತಿಳಿಸಿದ್ದಾರೆ.

ಆಷಾಡದ ಬಳಿಕ ಬರಲಿರುವ ಶ್ರಾವಣದ ನಂತರ ಸಾಲು ಸಾಲು ಹಬ್ಬಗಳು ಬರಲಿದ್ದು, ಹೀಗಾಗಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ದೇಶದಲ್ಲಿ ಅನ್ಲಾಕ್ 1 ಪ್ರಾರಂಭವಾದಾಗಿನಿಂದ, ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯಲ್ಲಿ ನಿರ್ಲಕ್ಷ್ಯ ಹೆಚ್ಚುತ್ತಿದೆ. ಈ ಮೊದಲು, ಮುಖವಾಡಗಳ ಬಳಕೆಯ ಬಗ್ಗೆ ನಾವು ಹೆಚ್ಚು ಜಾಗರೂಕರಾಗಿದ್ದೇವೆ, ‘ಡು ಗಜ್ ಡೋರಿ’ ಮತ್ತು ದಿನಕ್ಕೆ ಹಲವಾರು ಬಾರಿ 20 ಸೆಕೆಂಡುಗಳ ಕಾಲ ಕೈ ತೊಳೆಯುವುದು ಮುಖ್ಯ ಅಂತ ಹೇಳಿದರು.

‘ಕಂಟೈನ್‌ಮೆಂಟ್‌ ಜೋನ್ ಮೇಲೆ ಹೆಚ್ಚಿನ ನಿಗಾ ಅಗತ್ಯವಾಗಿದೆ. ಮಾಸ್ಕ್ ಧರಿಸಿಲ್ಲ ಎಂದು ದೇಶವೊಂದರ ಮುಖ್ಯಸ್ಥರಿಗೆ ದಂಡ ಹಾಕಿರುವ ಸುದ್ದಿ ಓದಿರಬಹುದು. ಭಾರತದಲ್ಲೂ ಇಂಥ ಕಠಿಣ ಕ್ರಮ ಅಗತ್ಯ. ಕಾನೂನಿನ ಎದುರು ಗ್ರಾಮದ ಪ್ರಧಾನ ಹಾಗೂ ದೇಶದ ಪ್ರಧಾನಿ ಇಬ್ಬರೂ ಒಂದೇ. ಅನ್ ಲಾಕ್ 2.0ರಲ್ಲಿ ಉದಾಸೀನರಾಗಿದ್ದರೆ, ಅಪಾಯ ಖಂಡಿತ. ಜನರ ಬೇಜವಾಬ್ದಾರಿ ವರ್ತನೆ ಚಿಂತೆ ಉಂಟು ಮಾಡಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

20 ಕೋಟಿ ಬಡ ಕುಟುಂಬಗಳ ಬ್ಯಾಂಕ್ ಖಾತೆಗಳಲ್ಲಿ 31,000 ಕೋಟಿ ಠೇವಣಿ ಇಡಲಾಗಿದೆ. ಅಲ್ಲದೆ, ರೂ. 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಲ್ಲಿ 18000 ಕೋಟಿ ಠೇವಣಿ ಇಡಲಾಗಿದೆ ಅಂತ ಹೇಳಿದರು. ಪಿಎಂ ಗರಿಬ್ ಆನ್ನ ಯೋಜನೆ ನವೆಂಬರ್ ಅಂತ್ಯದವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ 80 ಕೋಟಿ ಜನರಿಗೆ ಪ್ರಯೋಜನಗಳನ್ನು ನೀಡುವ ಈ ಯೋಜನೆ ನವೆಂಬರ್ ವರೆಗೆ ಮುಂದುವರಿಯುತ್ತದೆ ಅಂತ ಹೇಳಿದರು.

- Advertisement -
spot_img

Latest News

error: Content is protected !!