Thursday, April 18, 2024
Homeತಾಜಾ ಸುದ್ದಿಕೊರೊನ ರಣತಂತ್ರ ಭಾರತ ವಿಶ್ವಕ್ಕೆ ಮಾದರಿ : ಮೋದಿ ಮನ್ ಕಿ ಬಾತ್

ಕೊರೊನ ರಣತಂತ್ರ ಭಾರತ ವಿಶ್ವಕ್ಕೆ ಮಾದರಿ : ಮೋದಿ ಮನ್ ಕಿ ಬಾತ್

spot_img
- Advertisement -
- Advertisement -

ನವದೆಹಲಿ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ  ಮಾರಕ ಕೊರೊನಾ ವಿರುದ್ಧ ನಮ್ಮ ಹೋರಾಟ ಇಡೀ ವಿಶ್ವಕ್ಕೆ ಮಾದರಿ, ಹೋರಾಟ ನಡೆಸುತ್ತಿರುವ  ನಮ್ಮ ದೇಶದ  ಕೊರೊನಾ ವಾರಿಯರ್ಸ್ ಮೇಲೆ  ಹಲ್ಲೆ ಅಸಹನೀಯ ,  ಒಂದು ವೇಳೆ ಹಲ್ಲೆ ನಡೆಸಿದರೆ ಅಂತಹವ ವಿರುದ್ಧ ಕಠಿಣ ಕಾನೂನು ಕ್ರಮ ವಿಧಿಸಲಾಗುತ್ತಿದೆ. ಸರ್ಕಾರದಿಂದ ಕೊರೊನಾ ವಾರಿಯರ್ಸ್ ಗಾಗಿ covidwarriors.gov.in ವೆಬ್ ಸೈಟ್ ನ್ನು ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತನ್ನ ಮನ್ ಕಿ ಬಾಟ್ಗ್ ನಲ್ಲಿ ಹೇಳಿದರು .

ಇಂದಿನ  ಮನ್ ಕಿ ಬಾತ್ ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಪ್ರತಿಯೊಬ್ಬರೂ ಕೊರೊನಾ ವಿರುದ್ಧ ಸೇನಾನಿಗಳಾಗಿ  ಹೋರಾಡುತ್ತಿದ್ದಾರೆ. ದೇಶದ ಜನತೆ ಜೀವನಶ್ಯಕ  ಸೇವೆಗಳ ಪೂರೈಕೆಗಾಗಿ ಶ್ರಮಿಸಲಾಗುತ್ತಿದೆ. ದೇಶದ ಜನರ ಜೊತೆ ಸರ್ಕಾರವೂ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಒಬ್ಬರ ಸಹಾಯಕ್ಕೆ ಮತ್ತೊಬ್ಬರು ಮುಂದೆ ಬರುತ್ತಿದ್ದಾರೆ. ಮಹಾಮಾರಿ ನಡುವೆ ರೈತರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಕೆಲವರು ತಮ್ಮ ಬೆಳೆಗಳನ್ನೇ ಕೋರೋಣ ಹೋರಾಟದ ಒಂದು ಅಂಗವಾಗಿ  ದಾನ ಮಾಡುತ್ತಿದ್ದಾರೆಂದು ಪ್ರಧಾನಿ ಶ್ಲಾಘಿಸಿದರು.

ಇನ್ನು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ, ದೌರ್ಜನ್ಯ ನಡೆಸುವುದನ್ನು ನಾವು ಸಹಿಸುವುದಿಲ್ಲ. ಒಂದು ವೇಳೆ ಹಲ್ಲೆ, ದೌರ್ಜನ್ಯ ನಡೆಸಿದರೆ ಕಠಿಣ ಶಿಕ್ಷೆ ನೀಡಲಾಗುತ್ತದ. ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡು ರಕ್ಷಣೆ ನೀಡಲಾಗುತ್ತಿದೆ. ಲಾಕ್ ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ. ಪೊಲೀಸರ ಜೊತೆಗೆ ಭಾವನಾತ್ಮಕವಾಗಿ ಬೆರೆಯಿರಿ. ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ. ಈ ಸಂಕಷ್ಟದಲ್ಲಿ  ದೇಶದ ಸಂಕಲ್ಪಶಕ್ತಿ ಹೆಚ್ಚುತ್ತಿದೆ. ಭಾರತ ಇತರೇ ದೇಶಗಳಿಗೂ ಸಹಾಯಹಸ್ತ ಚಾಚುತ್ತಿದೆ. ಅಗತ್ಯ ವಸ್ತುಗಳನ್ನು ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ವಿದೇಶಿ ನಾಯಕರು ಇದಕ್ಕೆ ಭಾರತೀಯರಿಗೆ  ಗೌರವ ಸಲ್ಲಿಸುತ್ತಿದ್ದಾರೆ. ಭಾರತದ ಕೊಡುಗೆಯನ್ನು ವಿಶ್ವವೇ ಹಾಡಿಹೊಗಳುತ್ತಿದೆ ಎಂದು ಬಣ್ಣಿಸಿದರು. ಅಭಿವೃದ್ಧಿ ಹೊಂದಿದ ದೇಶಗಳಿಗೂ ಭಾರತ ಮಾದರಿಯಾಗಿದೆ ಎಂದು ಹರ್ಷ  ವ್ಯಕ್ತಪಡಿಸಿದರು.

ಇನ್ನು ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕಿರುವುದು ನಮ್ಮ ಕರ್ತವ್ಯ. ಪೊಲೀಸರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ಪೊಲೀಸರೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯುತ್ತಿದ್ದಾರೆ. ಕಷ್ಟದ ಸಂದರ್ಭದಲ್ಲೇ ಜನತೆಯ ಗುಣ ಬೆಳಕಿಗೆ ಬರುತ್ತಿದೆ. ದೇಶದ ಜನತೆಗೆ ಮನವಿ ಮಾಡುತ್ತೇನೆ. ದಯವಿಟ್ಟು ಮಾಸ್ಕ್ ಧರಿಸಿ, ಮಾಸ್ಕ್ ಧರಿಸುವುದರಿಂದ ಕೊರೊನಾ ವಿರುದ್ಧ ಪಾರಾಗಬಹುದು. ಕೊರಣದಿಂದ ನಮ್ಮನ್ನು ನಾವು ರಕ್ಷಿಸುವುದರ ಜೊತೆಗೆ ಇತರರನ್ನು ಕೂಡ ರಕ್ಷಿಸಬೇಕಾಗಿದೆ  . ಸರ್ಕಾರದ ನಿಯಮಗಳನ್ನು ದೇಶದ ಮತ್ತು ನಿಮ್ಮ  ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪಾಲಿಸಿ ಎಂದು ಪ್ರಧಾನಿ ದೇಶದ ಜನತೆಯಲ್ಲಿ ಮನವಿ ಮಾಡಿದರು.

ನಮ್ಮ ಸಂಸ್ಕೃತಿಯಲ್ಲಿ ಪುರಾತನಕಾಲದಿಂದ ಆಯುರ್ವೇದವನ್ನು ನಂಬಿದ್ದೇವೆ. ಈಗ ಪ್ರಪಂಚವೂ ಆಯುರ್ವೇದವನ್ನು ಮೆಚ್ಚಿಕೊಳ್ಳುತ್ತಿದೆ. ಇನ್ನು ಪರಿಸರದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿ, ನಾವು ಪರಿಸರದ ಬಗ್ಗೆ ಕಾಳಜಿ ವಹಿಸಿದರೆ, ಪರಿಸರ ನಮ್ಮ ಬಗ್ಗೆ ಕಾಳಜಿ ವಹಿಸಲಿದೆ. ಈ ಭೂಮಿ ಇದ್ದರೆ ಮಾತ್ರ ನಾವು ಬದುಕಲು ಸಾಧ್ಯವಾಗುತ್ತದೆ. ಅದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ತಿಳಿಸಿದರು.

ಇಂದು ಅಕ್ಷಯ ತೃತೀಯ ಹಾಗೂ ಬಸವೇಶ್ವರರ ಜಯಂತಿಯೂ ಇದೆ. ಇಡೀ ದೇಶ ಬಸವಣ್ಣನನ್ನು ನೆನೆಯುತ್ತಿದೆ. ಇಂತಹ ಕಷ್ಟದ ದಿನಗಳಲ್ಲಿ ಬಸವಣ್ಣನವರ ಮಾತುಗಳು ನಮಗೆಲ್ಲರಿಗೂ ಆದರ್ಶ ಎಂದು ಪ್ರಧಾನಿ ಅಭಿಪ್ರಾಯಪಟ್ಟರು…..

- Advertisement -
spot_img

Latest News

error: Content is protected !!