Friday, June 5, 2026
Homeಕರಾವಳಿಮಂಗಳೂರು: ಮೊಬೈಲ್ ಟವರ್ ಕಳವು ಆರೋಪಿಸಿ, ದೂರು ದಾಖಲು

ಮಂಗಳೂರು: ಮೊಬೈಲ್ ಟವರ್ ಕಳವು ಆರೋಪಿಸಿ, ದೂರು ದಾಖಲು

- Advertisement -
- Advertisement -

ಮಂಗಳೂರು: ಕಂಪೆನಿಯೊಂದು ಸ್ಥಾಪಿಸಿದ್ದ ಮೊಬೈಲ್‌ ಟವರ್‌ ಕಳವಾಗಿದೆ ಎಂದು ಕಂಪೆನಿಯ ಪ್ರತಿನಿಧಿ ಮಂಗಳೂರು ಉತ್ತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

22.45 ಲಕ್ಷ ರೂ. ಮೌಲ್ಯ ಬೆಂಗಳೂರಿನ ಜಿಟಿಎಲ್‌ ಇನ್ಪಾಸ್ಟ್ರಕ್ಚರ್ ಲಿಮಿಟೆಡ್‌ 2009ರ ಎ.6ರಂದು ಮಂಗಳೂರು ನಗರದ ಕಸಬಾ ಬಜಾರ್‌ನ ಸೈಟ್‌ವೊಂದರಲ್ಲಿ ಮೊಬೈಲ್‌ ಟವರ್‌ ಸ್ಥಾಪಿಸಿತ್ತು.

2021ರ ಮೇ 31ರಂದು ಕಂಪೆನಿಯ ಟೆಕ್ನೀಷಿಯನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ 22,45,339 ರೂ. ಮೌಲ್ಯದ ಮೊಬೈಲ್‌ ಟವರ್‌ ಕಳವಾಗಿತ್ತು ಎಂದು ಕಂಪೆನಿಯ ಪ್ರತಿನಿಧಿ ಸಂದೀಪ್‌ ಅವರು ನೀಡಿದ ದೂರಿನಂತೆ ಟವರ್‌ ಕಳವು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!