Friday, June 5, 2026
Homeಕರಾವಳಿಬೆಳ್ತಂಗಡಿ :ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಸುಭಾಷ್ಚಂದ್ರ ಬಿ. ಅವರಿಗೆ " ಎಮಿನೆಂಟ್ ಇಂಜಿನಿಯರ್ 2022...

ಬೆಳ್ತಂಗಡಿ :ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಸುಭಾಷ್ಚಂದ್ರ ಬಿ. ಅವರಿಗೆ ” ಎಮಿನೆಂಟ್ ಇಂಜಿನಿಯರ್ 2022 ಗೌರವ

- Advertisement -
- Advertisement -

ಬೆಳ್ತಂಗಡಿ : ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಕನ್ಯಾಡಿಯ ಸುಭಾಷ್ಚಂದ್ರ ಬಿ. ಇವರಿಗೆ ಎಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ ) ಬೆಳ್ತಂಗಡಿ ಸೆಂಟರ್ ವತಿಯಿಂದ ಸಂಸ್ಥೆಯ ಸ್ಥಾಪಕ ದಿನದ ಪ್ರಯುಕ್ತ ” ಎಮಿನೆಂಟ್ ಇಂಜಿನಿಯರ್ 2022 ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಬೆಳ್ತಂಗಡಿ ಸೆಂಟರ್ ನ ಛೇರ್ ಮೆನ್ ಇ. ಜಗದೀಶ್ ಪ್ರಸಾದ್ ಮಾತನಾಡಿ ಸಂಘದ ಸದಸ್ಯರಿಗೆ ಲೋಕೋಪಯೋಗಿ ಇಲಾಖೆಯ ರಿಜಿಸ್ಟ್ರೇಶನ್, ಟೆಂಡರಿಂಗ್ ಶಿಲ್ಲಿಂಗ್ ಸಿಸ್ಟಮ್ ಮುಂತಾದ ವಿಷಯಗಳ ಸಮಗ್ರ ಮಾಹಿತಿ ನೀಡುವಂತೆ ಹಾಗೆಯೇ ಸಂಘದ ಖಾಯಂ ಸದಸ್ಯತ್ವ ಪಡೆಯುವಂತೆ ಅವರನ್ನು ಗೌರವ ಪೂರ್ವಕವಾಗಿ ಆಮಂತ್ರಿಸಿದರು.

ಇಂಜಿನಿಯರ್ ಸುಭಾಷ್ಚಂದ್ರ ಇಲಾಖೆಯಲ್ಲಿನ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡರು. ಈ ವಿಶೇಷ ಗೌರವಕ್ಕಾಗಿ ಎಸಿಸಿಇ(ಐ) ಬೆಳ್ತಂಗಡಿ ಘಟಕಕ್ಕೆ ಅಭಿನಂದಿಸಿದರು.ಹಿರಿಯ  ಇಂಜಿನಿಯರ್ ಸಂಪತ್ ರತ್ನ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಇ. ವಿದ್ಯಾ ಕುಮಾರ್ ವಂದಿಸಿದರು. ಈ ಸಂದರ್ಭ ಖಜಾಂಚಿ ಇ. ಸುರೇಶ್ ಬಂಗೇರ, ಎಸ್ ಎಲ್ ಕನ್ಸ್ಟ್ರಕ್ಷನ್ ನ ಇ. ನಿತಿನ್ ಮತ್ತು ಚೇತನ್ ಕನ್ಸ್ಟ್ರಕ್ಷನ್ ನ ಇ. ಚೇತನ್ ಉಪಸ್ಥಿತರಿದ್ದರು. ಶ್ರೀಮತಿ ಸುಭಾಷ್ಚಂದ್ರ ಅವರನ್ನೂ ಗೌರವಿಸಲಾಯಿತು.

- Advertisement -

Latest News

error: Content is protected !!