Wednesday, June 17, 2026
Homeತಾಜಾ ಸುದ್ದಿನಾಗಮಂಗಲ ಘಟನೆ ಪೂರ್ವಯೋಜಿತ, ಮತಾಂಧರಿಗೆ ನಮ್ಮ ಸರ್ಕಾರ ಎಂಬ ಭಾವನೆ ಇದೆ; ವಿಧಾನ ಪರಿಷತ್ ಸದಸ್ಯ...

ನಾಗಮಂಗಲ ಘಟನೆ ಪೂರ್ವಯೋಜಿತ, ಮತಾಂಧರಿಗೆ ನಮ್ಮ ಸರ್ಕಾರ ಎಂಬ ಭಾವನೆ ಇದೆ; ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ

- Advertisement -
- Advertisement -

ಬೆಂಗಳೂರು: ನಾಗಮಂಗಲದಲ್ಲಿ ಮತಾಂಧ ಮುಸ್ಲಿಮರು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟವನ್ನು ನಡೆಸಿ, ಚಪ್ಪಲಿ ತೂರಾಟ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಿನ್ನೆ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ಕುರತು ಹೇಳಿಕೆ ನೀಡಿರುವ ಸಿ.ಟಿ. ರವಿ, 25ಕ್ಕೂ ಹೆಚ್ಚು ಅಂಗಡಿಗಳನ್ನು ಬೆಂಕಿ ಹಾಕಿ ಪೆಟ್ರೋಲ್ ಬಾಂಬ್ ಬಳಸಿ ಬೆಂಕಿ ಹಾಕಿರುವುದು ಪೂರ್ವಯೋಜಿತ ಕೃತ್ಯ ಎಂದು ಹೇಳಿದ್ದಾರೆ.

ಕಳೆದ ವರ್ಷ ಗಣೇಶೋತ್ಸವದ ವೇಳೆ ಗಲಭೆ ನಡೆಸುವ ಪ್ರಯತ್ನ ಮಾಡಿದ್ದರು, ಈ ವರ್ಷವೂ ಪೂರ್ವ ಸಿದ್ದತೆ ಮಾಡಿಕೊಂಡು ಗಲಭೆ ನಡೆದಿರುವುದು ಸ್ಪಷ್ಟ ಎಂದಿರುವ ರವಿ, ಮಾಹಿತಿ ಇದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಪೊಲೀಸ್ ಇಲಾಖೆ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ಮತಾಂಧರಿಗೆ ಇದು ನಮ್ಮ ಸರ್ಕಾರ ಎಂಬ ಭಾವನೆ ಇದ್ದು, ಈ ಕಾರಣದಿಂದ ತಮ್ಮ ಮತಾಂಧತೆಯ ಕೃತ್ಯವನ್ನು ಮನಸೋ ಇಚ್ಚೆ ಮಾಡುತ್ತಿದ್ದಾರೆ, ಹಾಗಾಗಿ ಸರ್ಕಾರ ಮತಾಂಧತೆಗೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಿ ಮತಾಂಧತೆಯನ್ನು ಮಟ್ಟ ಹಾಕಲಿ ಎಂದು ಸಿ.ಟಿ. ರವಿ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!